ಕ್ರಿಕೆಟ್ ಪ್ರತಿಭಾನ್ವೇಷಣೆಯಲ್ಲಿ 535 ಆಟಗಾರರ ಸ್ಪರ್ಧೆ

ಕ್ರಿಕೆಟ್ ಪ್ರತಿಭಾನ್ವೇಷಣೆಯಲ್ಲಿ 535 ಆಟಗಾರರ ಸ್ಪರ್ಧೆ

LK   ¦    Jul 21, 2019 10:20:44 AM (IST)
ಕ್ರಿಕೆಟ್ ಪ್ರತಿಭಾನ್ವೇಷಣೆಯಲ್ಲಿ 535 ಆಟಗಾರರ ಸ್ಪರ್ಧೆ

ಮೈಸೂರು: ಮೈಸೂರು ವಾರಿಯರ್ಸ್ ನ ಮಾಲೀಕರಾಗಿರುವ ಎನ್‍ಆರ್ ಸಮೂಹ ಹಮ್ಮಿಕೊಂಡಿದ್ದ ಕ್ರಿಕೆಟ್ ಪ್ರತಿಭಾನ್ವೇಷಣೆಯ (ಟ್ಯಾಲಂಟ್ ಹಂಟ್) ಆರನೇ ಆವೃತ್ತಿಯು ಶನಿವಾರ ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಬೆಂಗಳೂರಿನ ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿ ಹಾಗೂ ಮೈಸೂರಿನ ಎಸ್‍ ಡಿಎನ್‍ಆರ್ ಕ್ರೀಡಾಂಗಣದಲ್ಲಿ ಪ್ರತಿಭಾನ್ವೇಷಣೆಯ ಪಂದ್ಯಗಳು ನಡೆದವು. ಈ ಪೈಕಿ ಮೈಸೂರಿನಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ಸುಮಾರು 215 ಉತ್ಸಾಹಿ ಆಟಗಾರರು ಭಾಗವಹಿಸಿದ್ದರು. ಅವರಲ್ಲಿ35 ಬ್ಯಾಟ್ಸ್‍ಮನ್‍ಗಳು, 58 ಜನಆಲ್ ರೌಂಡರ್ ಗಳು 32ಜನ ಸ್ಪಿನ್ನರ್ ಗಳು, 85 ಜನವೇಗದ ಬೌಲರ್‍ಗಳು ಮತ್ತು 05 ಜನ ವಿಕೆಟ್ ಕೀಪರ್ ಗಳು ಇದ್ದರು.

ಬೆಂಗಳೂರಿನ ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಆಯ್ಕೆ ಪಂದ್ಯಾವಳಿಯಲ್ಲಿ 300 ಯುವ, ಉತ್ಸಾಹಿ ಕ್ರಿಕೆಟ್ ಆಟಗಾರರು ಸ್ಪರ್ಧೆಗಿಳಿದು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದರು. ಅವರಲ್ಲಿ 70 ಜನ ಮಧ್ಯಮ ವೇಗಿ ಬೌಲರ್‍ಗಳು, 50 ಜನ ಸ್ಪಿನರ್‍ಗಳು, 75 ಬ್ಯಾಟ್ಸ್ ಮನ್ ಗಳು, 80 ಜನಆಲ್ ರೌಂಡರ್‍ಗಳು ಮತ್ತು 25 ಜನ ವಿಕೆಟ್ ಕೀಪರ್ ಗಳು ಇದ್ದರು.

ಈ ಪೈಕಿ ಟೂ ಲೆಗ್ಸ್ ಆಟಗಾರರಿಂದ 40-50 ಜನ ಆಯ್ಕೆಯಾಗಿದ್ದು, ಇದೇ 23ರಂದು ಮಂಡ್ಯದ ಪಿಇಟಿ ಮೈದಾನದಲ್ಲಿ ನಡೆಯಲಿರುವ ಟ್ರಯಲ್ ಪಂದ್ಯಾವಳಿಯಲ್ಲಿ ಆಟಗಾರರು ಭಾಗವಹಿಸಲಿದ್ದಾರೆ. ಆಯ್ಕೆಯಾಗುವ ಆಟಗಾರರು ಸೈಕಲ್ ಪ್ಯೂರ್‍ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ 2019ರ ಕೆಪಿಎಲ್‍ನಲ್ಲಿಆಡುವ ಅವಕಾಶ ಪಡೆಯುತ್ತಾರೆ.