ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆ: ಪಾಂಡ್ಯ, ರಾಹುಲ್ ಗೆ ತಲಾ 20 ಲಕ್ಷ ರೂ. ದಂಡ

ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆ: ಪಾಂಡ್ಯ, ರಾಹುಲ್ ಗೆ ತಲಾ 20 ಲಕ್ಷ ರೂ. ದಂಡ

HSA   ¦    Apr 20, 2019 02:12:35 PM (IST)
ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆ: ಪಾಂಡ್ಯ, ರಾಹುಲ್ ಗೆ ತಲಾ 20 ಲಕ್ಷ ರೂ. ದಂಡ

ಮುಂಬಯಿ: ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ತುಂಬಾ ಅಶ್ಲೀಲವಾಗಿ ಮಾತನಾಡಿದ್ದ ಕ್ರಿಕೆಟಿಗರಾದ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಲಾ 20 ಲಕ್ಷ ರೂಪಾಯಿ ದಂಡ ಹೇರಿದೆ.

ಬಿಸಿಸಿಐಯ ಒಂಬುಡ್ಸ್ಮನ್ ನಿವೃತ್ತ ಜಸ್ಟಿಸ್ ಡಿ.ಕೆ.ಜೈನ್ ಅವರು ಈ ಪ್ರಕರಣದ ಕುರಿತಾಗಿ ಇಬ್ಬರಿಗೂ ದಂಡ ಹೇರಿದರು.

10 ಲಕ್ಷ ರೂಪಾಯಿಯನ್ನು ಪ್ಯಾರಾ ಮಿಲಿಟರಿ ಪಡೆಯಲ್ಲಿ ಮೃತಪಟ್ಟಿರುವ ಹತ್ತು ಮಂದಿ ಕಾನ್ ಸ್ಟೇಬಲ್ ಗಳ ಕುಟುಂಗಳಿಗೆ ಮತ್ತು ಇನ್ನು ಹತ್ತು ಲಕ್ಷ ರೂಪಾಯಿ ಅಂಧರ ಕ್ರಿಕೆಟ್ ಅಸೋಸಿಯೇಶನ್ ನ ನಿಧಿಗೆ ಪಾವತಿ ಮಾಡಬೇಕು ಎಂದು ಬಿಸಿಸಿಐ ಒಂಬುಡ್ಸಮೆನ್ ಸೂಚಿಸಿದೆ.

ಒಂದು ತಿಂಗಳ ಒಳಗಾಗಿ ಇದನ್ನು ಪಾವತಿಸಬೇಕಾಗಿದೆ ಎಂದು ಬಿಸಿಸಿಐ ಒಂಬುಡ್ಸಮೆನ್ ಹೇಳಿದೆ.

ಒಂದು ವೇಳೆ ಹಣ ಪಾವತಿ ಮಾಡಲು ವಿಫಲವಾದರೆ, ಆಗ ಹಣವನ್ನು ಅವರಿಬ್ಬರ ಪಂದ್ಯ ಶುಲ್ಕರಿಂದ ಕಡಿತ ಮಾಡಲಾಗುವುದು ಎಂದು ತಿಳಿಸಿದೆ.