11 ದಿನದ ಅಥ್ಲೀಟ್ ಕ್ರೀಡಾ ಹಬ್ಬಕ್ಕೆ ಬಿತ್ತು ವೈಭವದ ತೆರೆ

11 ದಿನದ ಅಥ್ಲೀಟ್ ಕ್ರೀಡಾ ಹಬ್ಬಕ್ಕೆ ಬಿತ್ತು ವೈಭವದ ತೆರೆ

SRJ   ¦    Apr 16, 2018 12:30:53 PM (IST)
11 ದಿನದ ಅಥ್ಲೀಟ್ ಕ್ರೀಡಾ ಹಬ್ಬಕ್ಕೆ ಬಿತ್ತು ವೈಭವದ ತೆರೆ

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿದ್ದ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ 11ನೇ ದಿನ ಸಂಭ್ರಮದ ತೆರೆ ಬಿದ್ದಿದೆ. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಅಥ್ಲೀಟ್ ಗಳು ಗೋಲ್ಡ್ ಕೋಸ್ಟ್ ನಗರಕ್ಕೆ ಬಾಯ್-ಬಾಯ್ ಹೇಳಿದ್ದಾರೆ.

ಕೊನೆಯ 11ನೇ ದಿನ ಸಂಜೆಯ ವೇಳೆಗೆ ಒಟ್ಟು 7 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಿತು. ನಂತರ ಸಂಜೆಯ ವೇಳೆಗೆ ಬಣ್ಣ-ಬಣ್ಣದ ದೀಪದ ಬೆಳಕು ಹಾಗೂ ಸಿಡಿಮದ್ದಿನ ಚಿತ್ತಾರದಲ್ಲಿ ಕ್ರೀಡಾಂಗಣ ಮಿನುಗುತ್ತಿತ್ತು.

ಇದೇ ಸಂದರ್ಭದಲ್ಲಿ ಕ್ರೀಡಾಳುಗಳು ಪಥಸಂಚಲನ ನಡೆಸಿದರು. ಮಹಿಳಾ ಬಾಕ್ಸರ್ ಎಂ.ಸಿ.ಮೇರಿಕೋಮ್ ಅವರು ಭಾರತದ ತ್ರಿವರ್ಣ ಧ್ವಜ ಹಿಡಿದು ಮುನ್ನಡೆದರು.

ಇನ್ನು ಆತಿಥೇಯ ಆಸ್ಟ್ರೇಲಿಯ ಒಟ್ಟು 198 ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, 136 ಪದಕ ಗೆದ್ದ ಇಂಗ್ಲೆಂಡ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 66 ಪದಕ ಗೆದ್ದ ಭಾರತ ತೃತೀಯ ಸ್ಥಾನ ಅಲಂಕರಿಸಿದೆ.