ಮುಂಬೈ ವಿರುದ್ಧ ಗೆಲುವು ದಾಖಲಿಸಿದ ರಾಜಸ್ಥಾನ ರಾಯಲ್ಸ್

ಮುಂಬೈ ವಿರುದ್ಧ ಗೆಲುವು ದಾಖಲಿಸಿದ ರಾಜಸ್ಥಾನ ರಾಯಲ್ಸ್

SRJ   ¦    Apr 23, 2018 10:39:45 AM (IST)
ಮುಂಬೈ ವಿರುದ್ಧ ಗೆಲುವು ದಾಖಲಿಸಿದ ರಾಜಸ್ಥಾನ ರಾಯಲ್ಸ್

ಜೈಪುರ: ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಮೂರು ವಿಕೆಟ್ ನಷ್ಟಕ್ಕೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲೋಪ್ಪಿಕೊಂಡಿತು.

ಸಂಜು ಸ್ಯಾಮ್ಸನ್ ಮತ್ತು ಬೆನ್ ಸ್ಟೋಕ್ಸ್ ಅವರ ಅಬ್ಬರದ ಹಾಗೂ ಅಂತಿಮ ಓವರ್ ಗಳಲ್ಲಿ ಕನ್ನಡಿಗ ಕೆ.ಗೌತಮ್ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ಆರಂಭಿಕ ಬ್ಯಾಟ್ಸ್ ಮನ್ ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶಾನ್ ಉತ್ತಮ ಆರಂಭ ಒದಗಿಸಿದರು. ಮುಂಬೈ 167 ಸ್ಕೋರ್ ಮಾಡಿತು. ಆದರೆ ಕೊನೆಯಲ್ಲಿ ರಾಜಸ್ಥಾನ ತಂಡ ರೋಚಕವಾಗಿ ಚೇಸ್ ಮಾಡಿ 3 ವಿಕೆಟ್ ಗಳಿಂದ ಗೆಲುವು ದಾಖಲಿಸಿತು.

168 ರನ್ ಗುರಿ ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಜು ಮತ್ತು ಬೆನ್ ಉತ್ತಮ ಸಾಥ್ ನೀಡಿದರು. ಸಂಜು 39 ಎಸೆತಕ್ಕೆ 52 ರನ್ ಗಳಿಸಿದರೆ, ಬೆನ್ ಸ್ಟೋಕ್ಸ್ 27 ಎಸೆತಕ್ಕೆ 40 ರನ್ ಗಳಿಸಿ ಗೆಲುವಿನ ಹೊಸ್ತಿಲಿಗೆ ತಂದರು.