ವಿಶ್ವಕಪ್ ನಿಂದ ಹೊರಬಿದ್ದ ಆರಂಭಿಕ ಆಟಗಾರ ಧವನ್

ವಿಶ್ವಕಪ್ ನಿಂದ ಹೊರಬಿದ್ದ ಆರಂಭಿಕ ಆಟಗಾರ ಧವನ್

HSA   ¦    Jun 19, 2019 05:34:34 PM (IST)
ವಿಶ್ವಕಪ್ ನಿಂದ ಹೊರಬಿದ್ದ ಆರಂಭಿಕ ಆಟಗಾರ ಧವನ್

ಬರ್ಮಿಂಗ್ ಹ್ಯಾಮ್: ಗಾಯಗೊಂಡಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಿಶ್ವಕಪ್ ನಿಂದ ಹೊರಬಿದ್ದಿದ್ದು, ರಿಷಬ್ ಪಂತ್ ಅವರ ಸ್ಥಾನ ತುಂಬಲಿದ್ದಾರೆ.

ಹೆಬ್ಬೆರಳಿನ ಗಾಯಕ್ಕೊಳಗಾಗಿರುವ ಧವನ್ ಜುಲೈ ಮಧ್ಯದ ತನಕ ಚೇತರಿಸಿಕೊಳ್ಳಲಿರುವರು ಮತ್ತು ಇದರಿಂದಾಗಿ ಅವರಿಗೆ ವಿಶ್ವಕಪ್ ನ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಜೂನ್ 9ರಂದು ಓವಲ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಧವನ್ ಕೈಗೆ ಗಾಯವಾಗಿತ್ತು. ಈ ಪಂದ್ಯದಲ್ಲಿ ಧವನ್ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ ಮತ್ತು ಹಲವಾರು ಮಂದಿ ತಜ್ಞರ ಅಭಿಪ್ರಾಯ ಕೇಳಿದ ಬಳಿಕ ಜುಲೈ ಮಧ್ಯದ ತನಕ ಅವರಿಗೆ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.