ಬ್ರೆಜಿಲ್ ಆಟಗಾರರಿಗೆ ಮೊಟ್ಟೆ, ಟೊಮೆಟೊದಿಂದ ಸ್ವಾಗತ

ಬ್ರೆಜಿಲ್ ಆಟಗಾರರಿಗೆ ಮೊಟ್ಟೆ, ಟೊಮೆಟೊದಿಂದ ಸ್ವಾಗತ

HSA   ¦    Jul 09, 2018 05:02:58 PM (IST)
ಬ್ರೆಜಿಲ್ ಆಟಗಾರರಿಗೆ ಮೊಟ್ಟೆ, ಟೊಮೆಟೊದಿಂದ ಸ್ವಾಗತ

ರಿಯೊ ಡಿ ಜೆನಿರೊ: ರಷ್ಯಾದಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ನ ಕ್ವಾರ್ಟರ್ ಫೈನಲಿನಲ್ಲಿ ಬೆಲ್ಜಿಯಂ ವಿರುದ್ಧ ಸೋಲುಂಡು ತವರಿಗೆ ಆಗಮಿಸಿದ ಬ್ರೆಜಿಲ್ ತಂಡವನ್ನು ಅಭಿಮಾನಿಗಳು ಮೊಟ್ಟೆ ಮತ್ತು ಟೊಮೆಟೊ ಎಸೆದು ಸ್ವಾಗತಿಸಿದರು!

ಬ್ರೆಜಿಲ್ ಅಭಿಮಾನಿಗಳು ಸೋಲಿನಿಂದ ನಿರಾಶೆಗೊಂಡಿದ್ದು, ಸೋಮವಾರ ಸ್ವದೇಶಕ್ಕೆ ಮರಳಿದ ತಂಡವನ್ನು ಅಭಿಮಾನಿಗಳು ಟೊಮೆಟೊ ಹಾಗೂ ಮೊಟ್ಟೆಯಿಂದ ಸ್ವಾಗತಿಸಿದರು.

ಬ್ರೆಜಿಲ್ ತಂಡದ ಆಟಗಾರರು ಇರುವ ಬಸ್ ಹೋಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಮೊಟ್ಟೆ ಹಾಗೂ ಟೊಮೆಟೊವನ್ನು ಬಸ್ ನತ್ತ ತೂರಿದರು. ಕ್ವಾರ್ಟರ್ ಫೈನಲಿನಲ್ಲಿ ಬ್ರೆಜಿಲ್ 1-2 ಅಂತರದಿಂದ ಬೆಲ್ಜಿಯಂ ವಿರುದ್ಧ ಸೋಲುಂಡಿತ್ತು.