ಎಲ್ಲಾ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದ ಗೌತಮ್ ಗಂಭೀರ್

ಎಲ್ಲಾ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದ ಗೌತಮ್ ಗಂಭೀರ್

HSA   ¦    Dec 05, 2018 09:48:55 AM (IST)
ಎಲ್ಲಾ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದ ಗೌತಮ್ ಗಂಭೀರ್

ನವದೆಹಲಿ: ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಅವರು ಎಲ್ಲಾ ಮಟ್ಟದ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಹಾಕಿರುವ ವಿಡಿಯೋದಲ್ಲಿ ನಿವೃತ್ತಿ ನಿರ್ಧಾರದ ಬಗ್ಗೆ ಗಂಭೀರ್ ಹೇಳಿಕೊಂಡಿದ್ದಾರೆ. ಗುರುವಾರದಿಂದ ಆರಂಭವಾಗುವ ಆಂಧ್ರಪ್ರದೇಶ ವಿರುದ್ಧದ ರಣಜಿ ಟ್ರೋಫಿಯಲ್ಲಿ ಗಂಭೀರ್ ಕೊನೆಯ ಸಲ ಆಡಲಿದ್ದಾರೆ.

2007ರ ವಿಶ್ವ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಆಕ್ರಮಣಕಾರಿ ಶೈಲಿಯ ಗಂಭೀರ ಆಟ ಕೂಡ ಪ್ರಮುಖ ಪಾತ್ರ ವಹಿಸಿತ್ತು.

2019ರಲ್ಲಿ ಗಂಭೀರ್ ಕೊನೆಯ ಸಲ ಟೆಸ್ಟ್ ಆಡಿದ್ದರು. ದೆಹಲಿ ತಂಡದ ಪರವಾಗಿ ಆಡುತ್ತಿರುವ ಗಂಭೀರ್ ನಾಯಕತ್ವ ತ್ಯಜಿಸಿದ್ದರು. ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್, 147 ಏಕದಿನ ಪಂದ್ಯಗಳಲ್ಲಿ 5238 ರನ್ ಮತ್ತು 37 ಟಿ-20 ಪಂದ್ಯಗಳಲ್ಲಿ 932 ರನ್ ಬಾರಿಸಿದ್ದರು.