ಮಂಗಳೂರು ವಿ.ವಿ. ಕುಸ್ತಿ: ಆಳ್ವಾಸ್ ಗೆ 12ನೇ ಬಾರಿ ಅವಳಿ ಪ್ರಶಸ್ತಿ

ಮಂಗಳೂರು ವಿ.ವಿ. ಕುಸ್ತಿ: ಆಳ್ವಾಸ್ ಗೆ 12ನೇ ಬಾರಿ ಅವಳಿ ಪ್ರಶಸ್ತಿ

Jan 07, 2017 03:37:47 PM (IST)

ಮೂಡುಬಿದಿರೆ: ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 5 ಮತ್ತು 6 ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ್ ಕಾಲೇಜುಗಳ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪುರುಷರ ಹಾಗೂ ಮಹಿಳೆಚಿುರು ಸತತ 12ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಪುರುಷರ ಹಾಗೂ ಮಹಿಳೆಯರ 16 ದೇಹತೂಕ ವಿಭಾಗಗಳಲ್ಲಿ ನಡೆದಿರುವ ಈ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪುರುಷರ 6 ವಿಭಾಗದಲ್ಲಿ ಹಾಗೂ ಮಹಿಳೆಯರ 8 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.  ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗ:
ರವಿ-57 ಕೆ.ಜಿ, ಹನುಮಂತ-61 ಕೆ.ಜಿ, ರಾಘವೇಂದ್ರ-70 ಕೆ.ಜಿ, ಬಸಪ್ಪ-74 ಕೆ.ಜಿ, ಜೀವನ್-86 ಕೆ.ಜಿ, ಸಾಗರ್-+97 ಕೆಜಿ ವಿಭಾಗದಲ್ಲಿ ಪ್ರಥಮ ರುದ್ರಶೇಖರ್-65 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗ:
ಧನುಶ್ರೀ ಪಾಟೀಲ್-48 ಕೆಜಿ, ಅರ್ಪಣಾ-53 ಕೆ.ಜಿ, ಲಕ್ಷ್ಮೀ-55 ಕೆ.ಜಿ, ಸಾವಕ್ಕ-58 ಕೆಜಿ, ಆತ್ಮಶ್ರೀ-60 ಕೆ.ಜಿ, ಮಹಾಲಕ್ಷ್ಮೀ-63 ಕೆ.ಜಿ, ನಾಗರತ್ನ-69 ಕೆ.ಜಿ, ಅನುಶ್ರೀ +690-75 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.