ಪರಿವರ್ತನಾ ಯಾತ್ರೆಯಲ್ಲಿ ಡಾನ್ಸ್ ಬೇಬಿ...ಡಾನ್ಸ್...!

ಪರಿವರ್ತನಾ ಯಾತ್ರೆಯಲ್ಲಿ ಡಾನ್ಸ್ ಬೇಬಿ...ಡಾನ್ಸ್...!

HSA   ¦    Jan 12, 2018 07:11:27 PM (IST)
ಪರಿವರ್ತನಾ ಯಾತ್ರೆಯಲ್ಲಿ ಡಾನ್ಸ್ ಬೇಬಿ...ಡಾನ್ಸ್...!

ಚಿಕ್ಕಬಳ್ಳಾಪುರ: ಬಿಜೆಪಿಯ ಪರಿವರ್ತನಾ ಯಾತ್ರೆಯ ವೇಳೆ ಬಾಗೇಪಲ್ಲಿಯಲ್ಲಿ ಜನರನ್ನು ಸೆಳೆಯಲು ಯುವತಿಯರ ಅಶ್ಲೀಲ ನೃತ್ಯಗಳೊಂದಿಗೆ ಜನರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ಬಿಜೆಪಿ ಮುಖಂಡ ಅರಿಕೆರೆ ಸಿ. ಕೃಷ್ಣಾರೆಡ್ಡಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ತಿಳಿದುಬಂದಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾದ ಆರ್ಕೆಸ್ಟ್ರಾದಲ್ಲಿ ಹಾಡುಗಳೊಂದಿಗೆ ಯುವತಿಯರು ಅಶ್ಲೀಲವೆನಿಸುವಂತಹ ನೃತ್ಯದಲ್ಲಿ ತೊಡಗಿದ್ದಾರೆ.

ಸೇರಿದ್ದವರು ಇದನ್ನು ನೋಡಿ ಕೇಕೆ ಹಾಕಿ ಕುಣಿಯಲು ಆರಂಭಿಸಿದರು. ಇದರ ಬಳಿಕ ಕೆಲವು ಮಂದಿ ವೇದಿಕೆಯೇರಿ ನರ್ತಿಸಲು ಆರಂಭಿಸಿದರು.