ಟಿಪ್ಪು ಇಲಿಗೂ ಸಮನಲ್ಲ: ಅನಂತಕುಮಾರ್ ಹೆಗಡೆ

ಟಿಪ್ಪು ಇಲಿಗೂ ಸಮನಲ್ಲ: ಅನಂತಕುಮಾರ್ ಹೆಗಡೆ

SB   ¦    Nov 14, 2017 09:48:05 PM (IST)
ಟಿಪ್ಪು ಇಲಿಗೂ ಸಮನಲ್ಲ: ಅನಂತಕುಮಾರ್ ಹೆಗಡೆ

ಕಾರವಾರ: ತನ್ನ ಅಧಿಕಾರವಧಿಯಲ್ಲಿ ಕಾರ್ಯಾಂಗ ಸಂಪೂರ್ಣ ದುರ್ಬಳಕೆಯನ್ನು ರಾಜ್ಯ ಕಾಂಗ್ರೆಸ್ ಸರಕಾರ ಮಾಡಿಕೊಂಡಿದೆ. ಇದೇ ಕಾಂಗ್ರೆಸ್ ದೊಡ್ಡ ಸಾಧನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.

ಅವರು ಉತ್ತರ ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ‍್ಯಾಲಿಯ ಸಂದರ್ಭದಲ್ಲಿ ಕುಮಟಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದ ಮೀನುಗಾರರು, ನೇಕಾರರು, ಕೃಷಿಕರು, ರೈತರು, ಮಹಿಳೆಯರು ಸೇರಿದಂತೆ ಇನ್ನಿತರರು ಸ್ವಾಭಿಮಾನದಿಂದ ಬದುಕುವಂತೆ ಮಾಡಬೇಕಾಗಿದ್ದು ಮುಖ್ಯಮಂತ್ರಿಯ ಜವಾಬ್ದಾರಿಯಾಗಿದೆ ಎಂದರು.

ದುಡಿಯುವ ಕೈಗಳಿಗೆ ಕೆಲಸ ನೀಡಲು ಅವಶ್ಯಕವಾದ ಯೋಜನೆಯನ್ನು ರೂಪಿಸಬೇಕು. ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ. ಮುಂದಿನ ಚುನಾವಣೆಯ ನಂತರ ಅಧಿಕಾರದಿಂದ ರಾಜ್ಯ ಸರಕಾರವನ್ನು ಜನ ಹೊಡೆದೊಡಿಸಲಿದ್ದಾರೆ ಎಂದರು.

ಟಿಪ್ಪು ಹುಲಿಯಲ್ಲ ಇಲಿ
ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತನಾಡಿ, ಟಿಪ್ಪುಸುಲ್ತಾನ್ ಹುಲಿಯಲ್ಲ. ಬದಲಾಗಿ ಇಲಿಗೂ ಸಮನಲ್ಲ ಎಂದು ಟೀಕಿಸಿದ್ದಾರೆ.
ಸಚಿವರು, ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಸತತ ಮನವಿ ಮಾಡಿದರೂ ಸರ್ಕಾರ ಜಯಂತಿಯನ್ನು ಹಠಕ್ಕೆ ಬಿದ್ದು ಮಾಡುತ್ತಿದೆ.
ಕರ್ನಾಟಕ ಸರ್ಕಾರ ಟಿಪ್ಪುವನ್ನು ಮೈಸೂರಿನ ಹುಲಿ ಎನ್ನುತ್ತಿದೆ. ಆದರೆ ಇತನಿಗೆ ಇಲಿಯ ಯೋಗ್ಯತೆಯು ಇಲ್ಲ. ಅಕ್ಬರ್ ಈ ದೇಶದ ಮಹಾನ್ ಪುರುಷ ಎನ್ನುವ ಸುಳ್ಳು ಇತಿಹಾಸವನ್ನು ಜನರ ತಲೆಯಲ್ಲಿ ತುಂಬುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಕಾಂಗ್ರೆಸ್ ನಲ್ಲಿ ಒಳ್ಳೆಯ ಜನ ಇದ್ದಾರೆ, ಸ್ವಾಭಿಮಾನ ಇದ್ದವರು, ಇಟಲಿ ಪಕ್ಷವನ್ನು ಬಿಟ್ಟು ಭಾರತದ ಬಿಜೆಪಿಗೆ ಬನ್ನಿ ನಿಮ್ಮ ಸ್ವಾಭಿಮಾನಕ್ಕೆ ತಕ್ಕಂತೆ ನಾವು ಅವಕಾಶ ಕಲ್ಪಿಸುತ್ತೇವೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ, ಕುಮಾರ ಬಂಗಾರಪ್ಪ, ಹರತಾಳ ಹಾಲಪ್ಪ, ಶ್ರೀರಾಮುಲು ಹಾಗೂ ಇನ್ನಿತರರು ಇದ್ದರು.

More Images