ವ್ಯಾಪಕ ಮಳೆ ಕದ್ರಾ, ಕೊಡಸಳ್ಳಿ ಆಣೆಕಟ್ಟಿನಿಂದ ನೀರು ಬಿಡುಗಡೆ

ವ್ಯಾಪಕ ಮಳೆ ಕದ್ರಾ, ಕೊಡಸಳ್ಳಿ ಆಣೆಕಟ್ಟಿನಿಂದ ನೀರು ಬಿಡುಗಡೆ

SB   ¦    Jul 12, 2019 09:42:49 AM (IST)
ವ್ಯಾಪಕ ಮಳೆ ಕದ್ರಾ, ಕೊಡಸಳ್ಳಿ ಆಣೆಕಟ್ಟಿನಿಂದ ನೀರು ಬಿಡುಗಡೆ

ಕಾರವಾರ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾಳಿಹಿನ್ನಿರಿನಲ್ಲೂ ವ್ಯಾಪಕ ಮಳೆಯಾಗಿದ್ದರಿಂದ ಕೊಡಸಳ್ಳಿ ಹಾಗೂ ಕದ್ರಾ ಜಲಾಶಯದ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಎರಡೂ ಆಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲಾಯಿತು.

ಮೊದಲ ಹಂತದಲ್ಲಿ ಕೊಡಸಳ್ಳಿ ಆಣೆಕಟ್ಟಿನ ಗರಿಷ್ಠ ಮಟ್ಟದವರೆಗೆ ನೀರು ಭರ್ತಿಯಾಗಿದ್ದರಿಂದ ಆಣೆಕಟ್ಟಿನ ಆರು ಗೇಟು ತೆಗೆದು೨೦ ಸಾವಿರ ಕ್ಯೂಸೆಕ್(೦.೨ ಟಿಎಂಸಿ) ನೀರು ಬಿಡುಗಡೆ ಮಾಡಲಾಯಿತು. ಇದರಿಂದ ಕಾರವಾರದ ಕದ್ರದಲ್ಲೂ ನೀರಿನ ಮಟ್ಟಏರಿಕೆಯಾಗಿದ್ದರಿಂದ ನಾಲ್ಕು ಗೇಟುಗಳನ್ನು ತೆರೆದು ೫೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಯಿತು. 

ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಮಳೆಯಾಗಿದ್ದರೂ ಸಹ ಜಲಾಶಯದಲ್ಲಿ ಶೇಖರಣೆಗೊಂಡಿದ್ದ ನೀರು ಬಿಡುಗಡೆಮಾಡರಲಿಲ್ಲ. ಆದರೆ ಈ ವರ್ಷ ೨೦ ದಿನ ತಡವಾಗಿ ಜಿಲ್ಲೆಯ ಕರಾವಳಿಗೆ ಮುಂಗಾರು ಪ್ರವೇಶವಾಗಿದ್ದರೂ ಸಹ ಕಳೆದ ೧೦ದಿನಗಳ ಅವಧಿಯಲ್ಲಿ ಭಾರೀ ಮಳೆಯಾಗಿದೆ. ಜಿಲ್ಲೆಯ ಕಾಳಿ ಹಿನ್ನಿರಿನಲ್ಲಿ ಭಾರೀ ಮಳೆಗೆ ಹಾಗೂ ಬೇರೆ ಬೇರೆ ಜಿಲ್ಲೆಯಲ್ಲೂಸಾಕಷ್ಟು ಮಳೆಯಾಗಿದ್ದರಿಂದ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಈಗಾಗಲೇ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದ್ದುಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿತ್ತು.

ಅದರಂತೆ ಗುರುವಾರವೂ ಭಾರೀ ಮಳೆ ಮುಂದುವರಿದಿದ್ದರಿಂದ ಹೆಚ್ಚುವರಿಯಾಗಿ ಆಣೆಕಟ್ಟಿನ ಸುರಕ್ಷೆತೆಗಾಗಿ ಮೊದಲಹಂತವಾಗಿ ಕೊಡಸಳ್ಳಿಯಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಯಿತು. ಅದೇ ನೀರು ಕದ್ರಾ ಆಣೆಕಟ್ಟೆಗೆಹರಿದು ಬರುವುದರಿಂದ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಎರಡನೇ ಹಂತದಲ್ಲಿ ಕಾರವಾರದ ಕದ್ರಾ ಆಣೆಕಟ್ಟಿನಿಂದ ನೀರು ಹೊರಬಿಡಲಾಯಿತು.