ಉತ್ತಮ ಆದಾಯದೊಂದಿಗೆ ತೆರಿಗೆ ವಿನಾಯಿತಿಯನ್ನೂ ಪಡೆಯಲು ಸುಲಭ ಮಾರ್ಗ ವಿಮೆ- ಜೆರ್ರಿ ಭುಟಿಯಾ

ಉತ್ತಮ ಆದಾಯದೊಂದಿಗೆ ತೆರಿಗೆ ವಿನಾಯಿತಿಯನ್ನೂ ಪಡೆಯಲು ಸುಲಭ ಮಾರ್ಗ ವಿಮೆ- ಜೆರ್ರಿ ಭುಟಿಯಾ

Mar 13, 2018 06:59:14 PM (IST)
ಉತ್ತಮ ಆದಾಯದೊಂದಿಗೆ ತೆರಿಗೆ ವಿನಾಯಿತಿಯನ್ನೂ ಪಡೆಯಲು ಸುಲಭ ಮಾರ್ಗ ವಿಮೆ- ಜೆರ್ರಿ ಭುಟಿಯಾ

2018-19ನೇ ಸಾಲಿನ ಆರ್ಥಿಕ ವರ್ಷ ಆರಂಭಕ್ಕೆ ನಾವು ಇನ್ನೊಂದು ತಿಂಗಳು ಹಿಂದಿದ್ದೇವೆ. ತಮ್ಮ ತೆರಿಗೆ ಮಿತಿಯನ್ನು ಇನ್ನಷ್ಟು ಕಡಿಮೆಗೊಳಿಸಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ವರ್ಷದ ಕೊನೆಯ ಕೆಲ ತಿಂಗಳನ್ನು ಪ್ರತಿವರ್ಷವೂ ಮೀಸಲಿಡುತ್ತಾರೆ. ಏಕೆಂದರೆ ಅಗತ್ಯವಾದ ಹೂಡಿಕೆಯನ್ನು ಪ್ರತಿವರ್ಷ ಮಾರ್ಚ್ ತಿಂಗಳ 31ರ ಒಳಗೇ ಪೂರ್ಣಗೊಳಿಸಿಕೊಳ್ಳಬೇಕಾಗುತ್ತದೆ.

ಇತ್ತೀಚಿನವರೆಗೂ ಬಹುತೇಕ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿಸಿಕೊಳ್ಳಲು ಹುಡುಕಿಕೊಳ್ಳುತ್ತಿದ್ದ ಏಕೈಕ ಮಾರ್ಗ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ ಹಾಗೂ ತೆರಿಗೆ ಉಳಿತಾಯದ ಸ್ಥಿರ ಠೇವಣಿ. ಈ ಮೂಲಕ ತಮ್ಮ ತೆರಿಗೆ ಪಾವತಿಯಿಂದ ಕೊಂಚ ನಿರಾಳತೆ ಪಡೆಯುತ್ತಿದ್ದರು. ಆದಾಗ್ಯೂ, ಕೇಂದ್ರ ಸರ್ಕಾರದ 2018ನೇ ಸಾಲಿನ ವಾರ್ಷಿಕ ಬಜೆಟ್ ಘೋಷಣೆಯಾದ ನಂತರ ಜನ ಹೂಡಿಕೆ ವಿಚಾರದಲ್ಲಿ ತಮ್ಮ ಮಾರ್ಗದಲ್ಲಿ ಒಂದು ಕಡ್ಡಾಯ ಬದಲಾವಣೆ ಮಾಡಿಕೊಂಡಿದ್ದಾರೆ. ತೆರಿಗೆಯ ಉಳಿತಾಯದ ಜತೆಗೆ ಆದಾಯವನ್ನೂ ಗಳಿಸುವ ಉದ್ದೇಶ ಹೊಂದಿದ್ದಾರೆ. ದೀರ್ಘಾವಧಿ ಬಂಡವಾಳ ಹೂಡಿಕೆ ಮೂಲಕ ಲಾಭ ಗಳಿಸುವ (ಎಲ್ಟಿಸಿಜಿ) ತೆರಿಗೆಯತ್ತ ಮರು ಚಿಂತನೆ ನಡೆಸಿದ್ದಾರೆ. ಇಕ್ವಿಟಿ ಆಧಾರಿತ ಮ್ಯೂಚ್ಯುವಲ್ ಫಂಡ್ ಮೂಲಕ ಗಳಿಕೆಯ ಮಾರ್ಗ ಹುಡುಕಿಕೊಳ್ಳುವ ಯತ್ನ ಆರಂಭಿಸಿದ್ದಾರೆ. ಸೂಚ್ಯಂಕದ ಲಾಭದತ್ತ ಇಂದು ಜನ ಬಲವಂತವಾಗಿ ಮರು ದೃಷ್ಟಿ ಹರಿಸುವ ಸಂದರ್ಭ ಎದುರಾಗಿದೆ. ಇಎಲ್ಎಸ್ಎಸ್ ನಂತಹ ವ್ಯವಸ್ಥಿತ ಹೂಡಿಕೆಯತ್ತ ಗಮನ ಹರಿಸುವ ದಿನ ಬಂದಿದೆ.

ಪಿಪಿಎಫ್ ಮೂಲಕ ಹೂಡಿಕೆ ಹಾಗೂ ಅದರಿಂದ ಗಳಿಸುವ ಆದಾಯ ತೆರಿಗೆ ರಹಿತವಾಗಿರುತ್ತದೆ. ಈ ಮಧ್ಯಮ ಆದಾಯವು ಸರ್ಕಾರದ ಭದ್ರತಾ ದರಗಳಿಗೆ ಹೋಲಿಸಿದಾಗ ಸಮನಾಗಿ ಇರುವುದಿಲ್ಲ. ತೆರಿಗೆ ಉಳಿತಾಯದ ಸ್ಥಿರ ಠೇವಣಿ ಮೇಲೆ ಹೂಡಿಕೆ, ಆದಾಯ ತೆರಿಗೆ ಕಾಯ್ದೆಯ 80ಸಿ ಸೆಕ್ಷನ್ ಅಡಿ ಅರ್ಹತೆ ಗಳಿಸುವುದು, ತೆರಿಗೆ ವ್ಯಾಪ್ತಿ ಅಡಿ ಅನುಮತಿಸಲಾದ ಮಿತಿಯನ್ನು ಮಾತ್ರ ತೆರಿಗೆಯಿಂದ ವಿನಾಯಿತಿ ಪಡೆಯಲಾಗುತ್ತದೆ.

ತೆರಿಗೆ ಉಳಿತಾಯಕ್ಕೆ ಉತ್ತಮ ಮಾರ್ಗ: ನಿಮ್ಮ ಅವಶ್ಯಕತೆ ಹಾಗೂ ಇಚ್ಛೆಯನ್ನು ಆಧರಿಸಿ ತೆರಿಗೆಯಿಂದ ವಿನಾಯಿತಿ ಪಡೆಯಲು, ನಿಮ್ಮ ಹಣಕಾಸಿನ ಗುರಿ ಮಾತ್ರ ಪೂರೈಸಲು ಸಹಕಾರಿಯಾಗುವ ಸಹಾಯ ಮಾಡುವಂತಹ ಹೂಡಿಕೆಯನ್ನು ನೀವು ಪರಿಗಣಿಸಬಹುದು, ಆದರೆ ತೆರಿಗೆ ಉಳಿಸಲು ಸಹಕಾರಿಯಾಗುವಂತದ್ದಾದರೆ ಈ ಕೆಳಗಿನವು ಅನುಕೂಲಕರ.

ಟರ್ಮ್ ಯೋಜನೆಗಳ ಆಯ್ಕೆ: ಟರ್ಮ್ ಜೀವ ವಿಮೆ ಯೋಜನೆಗಳನ್ನು ಹೂಡಿಕೆಯ ಆಯ್ಕೆಯಾಗಿ ವಿಂಗಡಿಸಲು ಸಾಧ್ಯವಿಲ್ಲ. ಆದರೆ ಇದು ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬದ ರಕ್ಷಣೆಗೆ ಬದ್ಧವಾಗಿರುತ್ತದೆ. ಅಲ್ಲದೇ ನೀವು ಹೆಚ್ಚಿನ ಆತಂಕವಿಲ್ಲದೇ ನಿಮ್ಮ ಹೂಡಿಕೆಯತ್ತ ಗಮನ ಹರಿಸಬಹುದು. ಒಂದೊಮ್ಮೆ ವಿಮಾದಾರರು ಟರ್ಮ್ ಅವಧಿಯಲ್ಲೇ ನಿಧನರಾದರೆ ಜೀವವಿಮಾ ಕಂಪನಿಯು ವಿಮೆಯ ನಾಮಿನಿಗೆ ಸಮ್ ಅಶ್ಯೂರ್ಡ್ ಮೊತ್ತವನ್ನು ನೀಡಿ ಅವನ/ಅವಳ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುತ್ತದೆ. ಈ ಅನುಕೂಲವು ದೀರ್ಘಾವಧಿ ಆರ್ಥಿಕ
ಸುರಕ್ಷೆಯನ್ನು ಒದಗಿಸುತ್ತದೆ. ಜತೆಗೆ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಅಲ್ಲದೇ ಟರ್ಮ್ ಯೋಜನೆಗಳಲ್ಲಿ ಕಂತಿನ ಪಾವತಿ ಕೂಡ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ.

ಯೂನಿಟ್ ಆಧಾರಿತ ವಿಮಾ ಯೋಜಯು: ಯುಎಲ್ಟಿಪಿ ಗ್ರಾಹಕರು ತ್ರಿವಳಿ ತೆರಿಗೆ ವಿನಾಯಿತಿಯ ಲಾಭವನ್ನು ಈ ಯೋಜನೆಯಡಿ ಖಾತ್ರಿಯಾಗಿ ಪಡೆಯುತ್ತಾರೆ. ಇದನ್ನು ಹೂಡಿಕೆ, ಗಳಿಕೆ, ಮರಳಿ ಪಡೆಯುವ ಸಂದರ್ಭದಲ್ಲಿ ಪಡೆಯಬಹುದಾಗಿದೆ. ಯುಎಲ್ಟಿಪಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಕಡಿತದ ಅರ್ಹತಾ ವ್ಯಾಪ್ತಿಗೆ ಬರುತ್ತದೆ. ಗಳಿಸಿದ ಹಣವನ್ನು ಮರಳಿ ಪಡೆಯುವ ಸಂದರ್ಭ ತೆರಿಗೆ ವಿನಾಯಿತಿ ಲಭ್ಯ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(10ಡಿ) ಅಡಿ ಈ ಲಾಭ ಪಡೆಯಬಹುದು. ದೀರ್ಘಾವಧಿ ಹಣ ಗಳಿಕೆ ತೆರಿಗೆ (ಎಲ್ಟಿಸಿಸಿ) ಪರಿಚಯದೊಂದಿಗೆ ಮ್ಯೂಚ್ಯುವಲ್ ಫಂಡ್ ಗಳು ಬಂದ ನಂತರ ಯುಎಲ್ಟಿಪಿ ಮೂಲಕ ಹೂಡಿಕೆ ಮಾಡುವುದು ಮ್ಯೂಚ್ಯುವಲ್ ಫಂಡ್ ಹೂಡಿಕೆ ವಿಚಾರದಲ್ಲಿ ಅತ್ಯಂತ ಆಕರ್ಷಕ ಆಯ್ಕೆ ಎಂದು ಪರಿಗಣಿಸಲ್ಪಡುತ್ತಿದೆ. ಸಾಮಾನ್ಯವಾಗಿ ಸ್ಥಿರ ಠೇವಣಿ ನೀಡುವ ಸೌಲಭ್ಯಕ್ಕಿಂತ ಹೆಚ್ಚಿನ ಹಾಗೂ

ಗ್ಯಾರೆಂಟಿಯ ಪ್ರತಿಫಲವನ್ನು ಇದು ನೀಡುತ್ತದೆ. ಇದು ಮೂಲಗಳಲ್ಲಿ ತೆರಿಗೆ ಕಡಿತ ಟಿಡಿಎಸ್) ( ಎಷ್ಟು ಎನ್ನುವ ವಿಚಾರವನ್ನು ಆಧರಿಸಿ ಇರುತ್ತದೆ. ಗಳಿಕೆಯು 50,000 ಮೇಲ್ಪಟ್ಟಿದ್ದರೆ ಹಾಗೂ ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಿರೀಕ್ಷೆಗೂ ಮೀರಿದ ಲಾಭ ಗಳಿಸಬಹುದು.

ಆರೋಗ್ಯ ವಿಮೆಯನ್ನು ನಿಮಗಾಗಿ ಹಾಗೂ ನಿಮ್ಮ ಅವಲಂಬಿತರಿಗಾಗಿ: ಕೆಲ ನಾಗರೀಕರು ತಮ್ಮ ಸಂಸ್ಥೆ ನೀಡುವ ಆರೋಗ್ಯ ವಿಮೆಯನ್ನು ಮಾತ್ರ ಅವಲಂಬಿಸಿ ಇರುತ್ತಾರೆ. ಆದರೆ ಪ್ರತಿಯೊಬ್ಬರೂ ತಮ್ಮ ಸ್ವಂತಕ್ಕೆ ಒಂದು ಆರೋಗ್ಯ ವಿಮೆ ಹೊಂದುವ ಅಗತ್ಯವಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ನೀಡುವ ನಿಬಂಧನೆಗಳ ಅಡಿ ಲಭ್ಯವಿದೆ. ಆರೋಗ್ಯ ವಿಮೆ ಕೊಳ್ಳುವ ಗ್ರಾಹಕ 25,000 ಸಾವಿರ ರೂ.ವರೆಗಿನ ಕಂತಿನ ಮೊತ್ತದ ಮೇಲಿನ ತೆರಿಗೆಯನ್ನು ಉಳಿಸಿಕೊಳ್ಳಬಹುದಾಗಿದೆ. ನಿಮ್ಮ ಪಾಲಕರು 60 ವರ್ಷ ಮೀರಿದವರಾಗಿದ್ದರೆ, ನೀವು ಅವರಿಗೆ ಒಂದು ಆರೋಗ್ಯ ವಿಮೆ ಮಾಡಿಸಿಕೊಡುವುದಕ್ಕಿಂತ ಉತ್ತಮ ಪರಿಹಾರ ಮಾರ್ಗ ಇನ್ನೊಂದಿಲ್ಲ. ಅವರೂ ಸಾಕಷ್ಟು ನಿರಾಳತೆ ಹೊಂದಬಹುದು. ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಕೂಡ ವಿಸ್ತರಿಸಲಾಗಿದೆ. ಇದುವರೆಗೂ 30,000 ರೂ. ಇದ್ದ ಮೊತ್ತವನ್ನು 50.000 ರೂ.ಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಈ ಅನುಕೂಲ ಲಭ್ಯವಿದೆ.

ಆದಾಯದೊಂದಿಗೆ, ತೆರಿಗೆ ಪಾವತಿಸುವ ಹೊಣೆಗಾರಿಕೆ ಕೂಡ ಬರುತ್ತದೆ. ಇದಕ್ಕಾಗಿ ಮೊದಲು ಆದಾಯ ತೆರಿಗೆ ಪ್ರಸ್ತಾವಗಳನ್ನು ಮೊದಲು ಗಮನವಿಟ್ಟು ಓದಿಕೊಳ್ಳಬೇಕು. ಸರ್ಕಾರದ ಕಾನೂನು ಪ್ರಕಾರ ನ್ಯಾಯಸಮ್ಮತವಾಗಿ ಹೆಚ್ಚು ಪ್ರಮಾಣದ ತೆರಿಗೆಯನ್ನು ಉಳಿಸುವ ಹಾಗೂ ಉತ್ತಮ ಹೂಡಿಕೆ ಮಾಡುವುದು ಉತ್ತಮ ಆದಾಯವನ್ನು ಕೂಡ ಒದಗಿಸುತ್ತದೆ. ಈ ಮೇಲಿನ ವಿವರಣೆ, ಈ ಮೇಲಿನ ವಿಮಾ ಉತ್ಪನ್ನಗಳು ವಿಶೇಷವಾಗಿ ಯುಎಲ್ಐಪಿಗಳ ಹೂಡಿಕೆಯಲ್ಲಿ ಲಾಭದಾಯಕವಾಗಿವೆ.