ಪರಿಸರ ಇಲಾಖೆಯ ಪರವಾನಿಗಿ ಪಡೆಯದೆ ಕೈಗಾ ಅಣುಸ್ಥಾವರ ವಿಸ್ತರಣೆ: ಸತೀಶ ಸೈಲ್ ಆರೋಪ

ಪರಿಸರ ಇಲಾಖೆಯ ಪರವಾನಿಗಿ ಪಡೆಯದೆ ಕೈಗಾ ಅಣುಸ್ಥಾವರ ವಿಸ್ತರಣೆ: ಸತೀಶ ಸೈಲ್ ಆರೋಪ

SB   ¦    Sep 12, 2019 01:30:38 PM (IST)
ಪರಿಸರ ಇಲಾಖೆಯ ಪರವಾನಿಗಿ ಪಡೆಯದೆ ಕೈಗಾ ಅಣುಸ್ಥಾವರ ವಿಸ್ತರಣೆ: ಸತೀಶ ಸೈಲ್ ಆರೋಪ

ಕಾರವಾರ: ಪರಿಸರ ಇಲಾಖೆಗೆ ಸಂಬಂಧಿಸಿದ ಸೂಕ್ತ ಪರವಾನಿಗಿ ಪಡೆಯದೆ ಕೈಗಾದ ಅಣು ವಿದ್ಯುತ್ ೫-೬ನೇ ಘಟಕ ವಿಸ್ತರಣೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಆರೋಪಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಜನವಿರೋಧದ ನಡುವೆ ಜಿಲ್ಲಾಡಳಿತ ಪರವಾನಿಗಿ ನೀಡಿದೆ. ಕೈಗಾ ಅಣುಸ್ಥಾವರ ನಿರ್ಮಾಣವಾಗುವ ಪೂರ್ವದಲ್ಲಿ ಪರಿಸರ ಸಂಬಂಧಿ ಪರವಾನಿಗಿ ಪಡೆದುಕೊಂಡಿದೆಯೇ ಎಂದು ಸ್ಪಷ್ಟಪಡಿಸಬೇಕ. ಕೋತಿಗಾಂವ್, ಅಣಶಿ ವೈಲ್ಡ್ ಲೈಪ್ ಹಾಗೂ ಹುಲಿ ಸಂರಕ್ಷಿತ ಪ್ರದೇಶ ಸಮೀಪದಲ್ಲಿರುವಾಗ ಕೈಗಾದಲ್ಲಿ ಹೆಚ್ಚುವರಿ ಘಟಕ ಸ್ಥಾಪನೆಗೆ ಪರಿಸರ ಇಲಾಖೆ ಅನುಮತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿಗಳನ್ನು ಕೇಳಿದರೆ ಯಾವುದೇ ಉತ್ತರವನ್ನು ಅವರು ನೀಡುತ್ತಿಲ್ಲ ಎಂದು ಆರೋಪಿಸಿದರು.

ಕೈಗಾ ಅಣು ವಿದ್ಯುತ್ ಘಟಕದಲ್ಲಿ ಉತ್ಪಾದನೆ ಆದ ತ್ಯಾಜ್ಯವನ್ನು ನದಿಗಳ ಮೂಲಕ ಬಿಡಲಾಗುತ್ತಿದೆ. ಇದರಿಂದ ಜನರಿಗೆ ಆರೋಗ್ಯ ಸಮಸ್ಯೆ ಎದುರಾದ ಬಗ್ಗೆ ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಐದು ಮತ್ತು ಆರನೇ ಘಟಕ ಸ್ಥಾಪನೆ ದೇಶದ ಅಭಿವೃದ್ಧಿಗಾಗಿ ಬೇಕು. ಆದರೆ ಸೂಕ್ತ ಪರವಾನಿಗಿ ಪಡೆಯದೆ ಮಾಡುತ್ತಿರುವುದು ಸರಿಯಲ್ಲ. ಅಣು ವಿದ್ಯುತ್ ಘಟಕ ನಿರ್ಮಾಣ ಮಾಡುವ ಮುನ್ನ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು. ಮೊದಲನೇ ಘಟಕ ನಿರ್ಮಾಣ ಮಾಡುವಾಗಲೇ ಅನುಮತಿ ಪಡೆಯಲಾಗಿದೆ ಎಂದು ಕೈಗಾದ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಬೇಕು ಎಂದರು.

ಕೈಗಾದಲ್ಲಿ ೫ ಮತ್ತು ೬ನೇ ಅಣು ವಿದ್ಯುತ್ ಘಟಕ ಸ್ಥಾಪನೆಯಿಂದ ೮೦೦ಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ. ಆದರೆ ಈ ಹಿಂದೆ ೧ ರಿಂದ ೪ ನೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ಕಳೆದ ೧೫ ರಿಂದ ೨೦ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಯಾರಿಗೂ ಉದ್ಯೋಗ ಖಾಯಂ ಮಾಡಿಲ್ಲ. ಇದರಿಂದ ಅನೇಕ ಜನರು ತೊಂದೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ೫-೬ನೇ ಘಟಕ್ಕೆ ಈ ಉದ್ಯೋಗಿಗಳು ವಯೋಮಿತಿ ಮೀರಿರುವುದರಿಂದ ನೌಕರಿ ಪಡೆಯಲು ಸಹ ಸಾಧ್ಯವಾಗುವುದಿಲ್ಲ.

ಇದರಿಂದ ಅನೇಕ ಯುವಕರು ಗುತ್ತಿಗೆ ಆಧಾರದಲ್ಲೇ ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಹೊಸ ಘಟಕದಲ್ಲಿ ಆಯಾ ಉದ್ಯೋಗಕ್ಕೆ ಹಿಂದಿನ ಘಟಕದಲ್ಲೇ ದುಡಿಯುವ ಯುವಕರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಹೆಚ್ಚುವರಿ ಘಟಕ ಸ್ಥಾಪನೆ ನಂತರ ೮೦೦ಕ್ಕೂ ಅಧಿಕ ಉದ್ಯೋಗ ಸ್ಥಾಪನೆಯಾಗಲಿದ್ದರಿಂದ ದೇಶದ ಯಾವುದೇ ಭಾಗದವರು ಕೂಡ ಉದ್ಯೋಗಕ್ಕೆ ಬರಬಹುದಾಗಿದ್ದು, ಈಗಾಗಲೇ ಕೆಲಸ ಮಾಡುತ್ತಿರುವವರು ಸ್ಪರ್ಧೆಗೆ ಅನರ್ಹರಾಗಲಿದ್ದಾರೆ. ಹೀಗಾಗಿ ಅವರು ನಿರ್ಗತಿಕರಾಗಲಿದ್ದಾರೆ ಎಂದು ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.