ಮದುವೆಗೆ ವಿರೋಧ: ದೇಸ್ಥಾನದ ಬಳಿ ಪ್ರೇಮಿಗಳು ಆತ್ಮಹತ್ಯೆ

ಮದುವೆಗೆ ವಿರೋಧ: ದೇಸ್ಥಾನದ ಬಳಿ ಪ್ರೇಮಿಗಳು ಆತ್ಮಹತ್ಯೆ

LK   ¦    Jun 23, 2019 11:18:02 AM (IST)
ಮದುವೆಗೆ ವಿರೋಧ: ದೇಸ್ಥಾನದ ಬಳಿ ಪ್ರೇಮಿಗಳು ಆತ್ಮಹತ್ಯೆ

ಚಾಮರಾಜನಗರ: ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಗವಿರಾಯಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.

ಕೊಳ್ಳೇಗಾಲ ತಾಲ್ಲೂಕಿನ ಉಗನೀಯ ಗ್ರಾಮದ ಕಿರಣ್ (23) ಮತ್ತು ಸಂಗೀತಾ (17) ಎಂಬುವವರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಪ್ರೇಮಿಗಳು.

ಸತ್ತೇಗಾಲದ ಸಮೀಪದ ಗವಿರಾಯಸ್ವಾಮಿ ದೇವಸ್ಥಾನದ ಬಳಿ ಕಳೆದ ಮೂರು ದಿನಗಳ ಹಿಂದೆ ಆಗಮಿಸಿದ್ದ ಕಿರಣ್ ಹಾಗೂ ಸಂಗೀತಾ, ತಾವು ಮದುವೆಯಾಗಿ ಸುಖ ಸಂಸಾರ ಸಾಗಿಸಲು ಮನೆಯವರು ಅಡ್ಡಿ ಪಡಿಸುತ್ತಿರುವುದನ್ನು ಪರಸ್ಪರ ವಿನಿಮಯ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದ್ದು, ಮೃತ ದೇಹದ ಸಮೀಪದಲ್ಲೇ ವಿಷದ ಬಾಟಲ್ ದೊರೆತಿದೆ. ಒಂದು ಕಡೆ ಮೊಬೈಲ್ ಮತ್ತು ಸಂಗೀತಾಳ ವೇಲ್ ಇದ್ದು, ಪ್ರೀತಿಸಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ವಾರಾಸುದಾರರಿಗೆ ನೀಡಲಾಗಿದೆ.