ಅಂಬರೀಶ್ ಹುಟ್ಟುಹಬ್ಬ ದಿನ ಮಂಡ್ಯದಲ್ಲಿ ಸ್ವಾಭಿಮಾನಿ ಸಮಾವೇಶ: ಸುಮಲತಾ

ಅಂಬರೀಶ್ ಹುಟ್ಟುಹಬ್ಬ ದಿನ ಮಂಡ್ಯದಲ್ಲಿ ಸ್ವಾಭಿಮಾನಿ ಸಮಾವೇಶ: ಸುಮಲತಾ

YK   ¦    May 25, 2019 11:57:20 AM (IST)
ಅಂಬರೀಶ್ ಹುಟ್ಟುಹಬ್ಬ ದಿನ ಮಂಡ್ಯದಲ್ಲಿ ಸ್ವಾಭಿಮಾನಿ ಸಮಾವೇಶ: ಸುಮಲತಾ

ಬೆಮಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಇದೇ 29ರಂದು ಅಂಬರೀಶ್ ಹುಟ್ಟುಹಬ್ಬದ ದಿನ ಮಂಡ್ಯದಲ್ಲಿ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.

ಶುಕ್ರವಾರ ಅಂಬರೀಶ್ ಪುಣ್ಯತಿಥಿಯಂದು ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನನ್ನ ಗೆಲುವನ್ನು ಮಂಡ್ಯದಲ್ಲಿ ಅಂಬರೀಶ್ ಹುಟ್ಟುಹಬ್ಬದ ದಿನದಂದು ಆಚರಿಸುತ್ತೇನೆ. ಅದಕ್ಕೆ ಸ್ವಾಭಿಮಾನಿ ಸಮಾವೇಶ ಎಂದು ಶೀರ್ಷಿಕೆ ಇಡಲಾಗಿದೆ ಎಂದರು.

ಸಮಾವೇಶದಲ್ಲಿ ನನ್ನ ರಾಜಕೀಯದಲ್ಲಿ ಮನೆ ಮಕ್ಕಳಂತೆ ಬೆನ್ನಿಗೆ ನಿಂತು ಬೆಂಬಲಿಸಿದ ಚಾಲೆಂಜಿಂಗ್ ಸ್ಟಾರ ದರ್ಶನ್ ಹಾಗೂ ರಾಂಕಿಗ್ ಸ್ಟಾರ್ ದರ್ಶನ್ ಅವರು ಭಾಗಿಯಾಗಿದ್ದಾರೆ.

ನನ್ನ ಗೆಲುವಿಗೆ ಬೆಂಬಲಿಸಿದ ಪ್ರತಿಯೊಬ್ಬ ನಾಯಕರು ಭಾಗಿಯಾಗಲಿದ್ದಾರೆ ಎಂದರು.