ರೌದ್ರಾವತಾರ ಸೃಷ್ಟಿಸಿದ ಪರಿಸರವಾಸಿಗಳು

ರೌದ್ರಾವತಾರ ಸೃಷ್ಟಿಸಿದ ಪರಿಸರವಾಸಿಗಳು

SB   ¦    Aug 13, 2019 06:30:26 PM (IST)
ರೌದ್ರಾವತಾರ ಸೃಷ್ಟಿಸಿದ ಪರಿಸರವಾಸಿಗಳು

ಕಾಸರಗೋಡು: ಕೋಣವೊಂದು ಗಂಟೆಗಳ ಕಾಲ ರೌದ್ರಾವತಾರ ಸೃಷ್ಟಿಸಿ ಪರಿಸರವಾಸಿಗಳನ್ನು ಬೆಚ್ಚಿ ಬೀಳಿಸಿದ ಘಟನೆ ಇಂದು(ಮಂಗಳವಾರ) ಮಧ್ಯಾಹ್ನ ನಗರ ಹೊರವಲಯದ ಚೌಕಿ ಎಂಬಲ್ಲಿ ನಡೆದಿದ್ದು, ಪೊಲೀಸರು, ಸ್ಥಳೀಯರು ಹರಸಾಹಸಪಟ್ಟು ಹಿಡಿಯುವಲ್ಲಿ ಯಶಸ್ವಿಯಾದರು.

ಚೌಕಿಯ ಮನೆಯೊಂದಕ್ಕೆ ತರಲಾಗಿದ್ದ ಕೋಣವು ಒಮ್ಮೆಲೇ ಹಗ್ಗ ತುಂಡರಿಸಿ ಓದಿದ್ದು, ಸಮೀಪದ ಮನೆಯೊಂದರ ಅಂಗಳಕ್ಕೆ ನುಗ್ಗಿ ರಂಪಾಟ ನಡೆಸಿತು.

ದಾರಿ ಮಧ್ಯೆ ಲಭಿಸಿದ್ದ ಆಟೋವನ್ನು ಹುಡಿ ಮಾಡಿ ಮುಂದೆ ಸಾಗಿದ ಕೊಂಡ ಮನೆಯೊಂದರ ಅಂಗಳಕ್ಕೆ ನುಗ್ಗಿ ಗಂಟೆಗಳ ಕಾಲ ದಾಂಧಲೆ ನಡೆಸಿತು. ಸುದ್ದಿ ತಿಳಿದು ಸ್ಥಳಕ್ಕೆ ತಲಪಿದ ಪೊಲೀಸರು ಮತ್ತು ಪರಿಸರವಾಸಿಗಳು ಹಿಡಿಯುವಲ್ಲಿ ಸಫಲರಾದರು. ಬಳಿಕ ಮಾಲಿಕನಿಗೆ ಒಪ್ಪಿಸಲಾಯಿತು