ಸಿಡಿಲಿಗೆ ಉರಿದ ತೆಂಗಿನ ಮರ, ಮನೆಗೆ ಹಾನಿ

ಸಿಡಿಲಿಗೆ ಉರಿದ ತೆಂಗಿನ ಮರ, ಮನೆಗೆ ಹಾನಿ

LK   ¦    May 25, 2019 05:31:18 PM (IST)
ಸಿಡಿಲಿಗೆ ಉರಿದ ತೆಂಗಿನ ಮರ, ಮನೆಗೆ ಹಾನಿ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಚಿಕ್ಕಾಟಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಉರಿದಿದ್ದಲ್ಲದೆ ಮನೆಗಳಲಿದ್ದ ಟಿವಿ ಭಸ್ಮವಾಗಿದೆ.

ರಾತ್ರಿ ಸಮಯದಲ್ಲಿ ಗ್ರಾಮದ ಸಿದ್ದರಾಜಪ್ಪ ಎಂಬುವರ ಮನೆಯ ಸಮೀಪದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಅದು ಉರಿದಿದೆ. ಅಲ್ಲದೆ, ಸಮೀಪದಲ್ಲಿ ಹಾದುಹೋಗಿದ್ದ ಮನೆಯ ವಿದ್ಯುತ್ ತಂತಿಗಳಿಗೆ ಹರಡಿ ತಂತಿಗಳು ಸಂಪೂರ್ಣ ಭಸ್ಮವಾಗಿದ್ದಲ್ಲದೆ ಮನೆಯೊಳಗಿದ್ದ ಟಿವಿ ಹಾಗೂ ಅದನ್ನಿಟ್ಟಿದ್ದ ಮರದ ಮೇಜು ಕೂಡ ಬೆಂಕಿಗಾಹುತಿಯಾಗಿದ್ದು, ಸ್ಪೋಟದ ರಭಸಕ್ಕೆ ಮನೆಯ ಗೋಡೆಗಳು ಬಿರುಕುಬಿಟ್ಟಿವೆ.

ಅದೃಷ್ಟವಶಾತ್ ಈ ಸಮಯದಲ್ಲಿ ಮನೆಯವರು ಪಕ್ಕದ ಮನೆಗೆ ತೆರಳಿದ್ದರಿಂದ ಅನಾಹುತ ತಪ್ಪಿದೆ.