ಪ್ರಿಯತಮೆಯ ತಂದೆಗೆ ಗುಂಡು ಹಾರಿಸಿದ ಯೋಧ

ಪ್ರಿಯತಮೆಯ ತಂದೆಗೆ ಗುಂಡು ಹಾರಿಸಿದ ಯೋಧ

HSA   ¦    May 25, 2019 03:51:21 PM (IST)
ಪ್ರಿಯತಮೆಯ ತಂದೆಗೆ ಗುಂಡು ಹಾರಿಸಿದ ಯೋಧ

ಹೊನ್ನಾಳಿ(ದಾವಣಗೆರೆ); ಪ್ರೀತಿಸಿದ ಹುಡುಗಿಯ ತಂದೆಗೆ ಯೋಧನೊಬ್ಬನು ಗುಂಡು ಹಾರಿಸಿದ ಘಟನೆಯು ಶುಕ್ರವಾರ ತಡರಾತ್ರಿ ವೇಳೆ ಇಲ್ಲಿ ನಡೆದಿದೆ.

ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಲು ನಿರಾಕರಿಸಿದ ಕಾರಣಕ್ಕಾಗಿ ಆಕೆಯ ತಂದೆ ಪ್ರಕಾಶ್ ಎಂಬವರ ಮೇಲೆ ಯೋಧ ದೇವರಾಜ್ ಎಂಬಾತ ಸಿಟ್ಟುಗೊಂಡು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಇದರ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಪ್ರಕಾಶ್ ಅವರಿಗೆ ಎರಡು ಗುಂಟು ತಗುಲಿದ್ದು, ಒಂದನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ. ಅವರು ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಎಂಟು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ದೇವರಾಜ್ ಮೂರು ವರ್ಷಗಳಿಂದ ಪ್ರಕಾಶ್ ಅವರ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಹುಡುಗಿ ಮನೆಯವರಿಗೆ ಈ ಮದುವೆಯು ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.

ರಜೆಯಲ್ಲಿ ಊರಿಗೆ ಬಂದಿದ್ದ ದೇವರಾಜ್ ಶುಕ್ರವಾರ ಸುಮಾರು 11 ಗಂಟೆಗೆ ಪ್ರಕಾಶ್ ಮನೆಗೆ ಹೋಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ಬಾಗಿಲು ಬಡಿದು, ತೆರೆಯಲು ಬಂದ ಪ್ರಕಾಶ್ ಅವರ ಮೇಲೆ ಗುಂಡು ಹಾರಿಸಿದ್ದಾನೆ.