ಲಾರಿ-ಕಾರು ಡಿಕ್ಕಿ: ನಿಶ್ಚಿತಾರ್ಥದಿಂದ ವಾಪಸ್ಸಾಗುತ್ತಿದ್ದ ಐವರು ಸಾವು

ಲಾರಿ-ಕಾರು ಡಿಕ್ಕಿ: ನಿಶ್ಚಿತಾರ್ಥದಿಂದ ವಾಪಸ್ಸಾಗುತ್ತಿದ್ದ ಐವರು ಸಾವು

YK   ¦    Jul 11, 2018 05:43:13 PM (IST)
ಲಾರಿ-ಕಾರು ಡಿಕ್ಕಿ: ನಿಶ್ಚಿತಾರ್ಥದಿಂದ ವಾಪಸ್ಸಾಗುತ್ತಿದ್ದ ಐವರು ಸಾವು

ತುಮಕೂರು: ಮಧುಗಿರಿ ಸಮೀಪದ ಕೆರೆಗಳ ಪಾಳ್ಯದ ಬಳಿ ಕಾರು ಮತ್ತು ಸಿಮೆಂಟ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಮಂದಿ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಕಾರಿನಲ್ಲಿದ್ದವರು ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.ಮೃತರನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.