ಕೊಡಗಿನ ಕೆಲವೆಡೆ ತುಂತುರು ಮಳೆ: ಜನರಲ್ಲಿ ಸಂತಸ

ಕೊಡಗಿನ ಕೆಲವೆಡೆ ತುಂತುರು ಮಳೆ: ಜನರಲ್ಲಿ ಸಂತಸ

YK   ¦    Mar 13, 2018 07:08:23 PM (IST)
ಕೊಡಗಿನ ಕೆಲವೆಡೆ ತುಂತುರು ಮಳೆ: ಜನರಲ್ಲಿ ಸಂತಸ

ಮಡಿಕೇರಿ: ಮಂಗಳವಾರ ಸಂಜೆ ಕೊಡಗಿನ ಕೆಲವೆಡೆ ತುಂತುರು ಮಳೆಯಾಗಿದ್ದು ಬಿಸಿಲ ಬೇಗೆಯಿಂದ ಜನರಿಗೆ ಸ್ವಲ್ಪ ಆರಾಮ ದೊರಕಿತು.

ಇನ್ನೂ ನಗರದಲ್ಲಿ ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗಿತ್ತು. ಮಂಗಳವಾರ ಜಿಲ್ಲೆಯಾದ್ಯಂತ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣದಿಂದ ಕೂಡಿತ್ತು. ನಾಪೋಕ್ಲು, ತಲಕಾವೇರಿ, ಭಾಗಮಂಡಲ, ಚೇರಂಬಾಣೆ, ವಿರಾಜಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಪೊನ್ನಂಪೇಟೆ, ಚೆನ್ನಂಗೊಲ್ಲಿ, ಹಾತೂರು, ಕುಂದ, ಬಿ. ಶೆಟ್ಟಿಗೇರಿಯಲ್ಲೂ ಮಳೆಯ ಸಿಂಚನವಾಗಿದೆ.