ದಾವಣಗೆರೆ ಸಂಸದ ಜಿಎಂ ಸಿದ್ದೇಶ್ ಪುತ್ರಿಗೆ ಕೊರೋನಾ ಸೋಂಕು ದೃಢ

ದಾವಣಗೆರೆ ಸಂಸದ ಜಿಎಂ ಸಿದ್ದೇಶ್ ಪುತ್ರಿಗೆ ಕೊರೋನಾ ಸೋಂಕು ದೃಢ

HSA   ¦    Mar 25, 2020 09:36:57 AM (IST)
ದಾವಣಗೆರೆ ಸಂಸದ ಜಿಎಂ ಸಿದ್ದೇಶ್ ಪುತ್ರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ದಾವಣಗೆರೆ ಸಂಸದ ಜಿಎಂ ಸಿದ್ದೇಶ್ ಅವರ 37ರ ಹರೆಯದ ಪುತ್ರಿಯ ಕೊರೋನಾ ವೈರಸ್ ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.

ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಈಗ ಐಸೋಲೇಶನ್ ವಾರ್ಡ್ ನಲ್ಲಿ ಇಡಲಾಗಿದೆ.

ಇವರು ಇತ್ತೀಚೆಗೆ ಗಯಾನಾಗೆ ರಜೆ ಕಳೆಯಲು ತೆರಳಿದ್ದರು ಎಂದು ತಿಳಿದುಬಂದಿದೆ. ಅಲ್ಲಿಂದ ಮರಳಿದ ಬಳಿಕ ಅವರಲ್ಲಿ ಕೊವಿಡ್-19ನ ಕೆಲವು ಲಕ್ಷಣಗಳು ಕಂಡುಬಂದಿದೆ. ಇದರ ಬಳಿಕ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಲಾಗಿತ್ತು.

ಇದರಲ್ಲಿ ಅವರಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಆಕೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.