ಮೊಸಳೆ ಹಿಡಿದು ಸ್ಥಳಾಂತರ ಮಾಡಿದ ಅರಣ್ಯ ಇಲಾಖೆ

ಮೊಸಳೆ ಹಿಡಿದು ಸ್ಥಳಾಂತರ ಮಾಡಿದ ಅರಣ್ಯ ಇಲಾಖೆ

SB   ¦    Sep 14, 2018 07:40:40 PM (IST)
ಮೊಸಳೆ ಹಿಡಿದು ಸ್ಥಳಾಂತರ ಮಾಡಿದ ಅರಣ್ಯ ಇಲಾಖೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ಬಳಿ ರಸ್ತೆ ಮೇಲಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಶುಕ್ರವಾರ ಹಿಡಿದು ಸಾರ್ವಜನಿಕ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಮೊಸಳೆ ಬಂದು ವಾರದ ಹಿಂದೆ ಗ್ರಾಮದ ರಂಗಾಪುರದ ಹೊಲದಲ್ಲಿ ಕಾಣಿಸಿಕೊಂಡಿದ್ದು, ಬಳಿಕ ಸಮೀಪದ ಕುಂಬಾರಗಟ್ಟಿ ಕೆರೆಗೆ ಇಳಿದಿತ್ತು. ಆ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಬಲೆ ಹಾಕಿ ಹಿಡಿಯಲು ಯತ್ನಿಸಿ ವಿಫಲರಾದ್ದರು.

ರಾತ್ರಿ ವೇಳೆ ಮೊಸಳೆ ದಾಸನಕೊಪ್ಪದ ಬಳಿ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಮೊಸಳೆಯನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು. ಶುಕ್ರವಾರ ಕಾರ್ಯಾಚರಣೆ ನಡೆಸಿದ ಇಲಾಖೆ, ಮೊಸಳೆಯನ್ನು ಹಿಡಿದು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

More Images