ಬಾಲಕಾರ್ಮಿಕ ವಿರುದ್ಧ ದಿನಾಚರಣೆ: ಸಾಮೂಹಿಕ ಓಟ

ಬಾಲಕಾರ್ಮಿಕ ವಿರುದ್ಧ ದಿನಾಚರಣೆ: ಸಾಮೂಹಿಕ ಓಟ

SK   ¦    Jun 12, 2019 07:12:26 PM (IST)
ಬಾಲಕಾರ್ಮಿಕ ವಿರುದ್ಧ ದಿನಾಚರಣೆ: ಸಾಮೂಹಿಕ ಓಟ

ಕಾಸರಗೋಡು: ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯ ಜಿಲ್ಲಾ ಮಟ್ಟದ ಸಮಾರಂಭ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು.

2019ರ ವಿಶ್ವ ಬಾಲಕಾರ್ಮಿಕ ವಿರುದ್ಧ ದಿನ ಮುಂದಿಡಲಾಗುತ್ತಿದೆ ಎಂಬ ಸಂದೇಶದೊಂದಿಗೆ ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಜಾರಿಗೊಳಿಸುವ ಶರಣಬಾಲ್ಯಂ ಯೋಜನೆಯ ಅಂಗವಾಗಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಿಶ್ವ ಬಾಲಕಾರ್ಮಿಕ ದಿನಾಚರಣೆ ನಡೆಯಿತು.

ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಆಯೋಗ ಸದಸ್ಯೆಯರಾದ ಡಾ.ಷಾಹಿದಾ ಕಮಾಲ್, ಇ.ಎಂ.ರಾಧಾ ಮುಖ್ಯ ಅತಿಥಿಯಾಗಿದ್ದರು. ಚೈಲ್ಡ್ ವೆಲ್ ಫೇರ್ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ ಬಾಲಕಾರ್ಮಿಕತನ ವಿರುದ್ಧ ಪ್ರತಿಜ್ಞೆ ನಡೆಸಿಕೊಟ್ಟರು.

ಎನ್.ಎಸ್.ಎಸ್. ಸ್ವಯಂಸೇವಕರು, ಎನ್.ಸಿ.ಸಿ. ಕೆಡೆಟ್ ಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕಾಸರಗೋಡು ಸರಕಾರಿ ಕಾಲೇಜು ವರೆಗೆ ಸಾಮೂಹಿಕ ಓಟ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಸುರು ನಿಶಾನೆ ತೋರಿದರು. ದಿನಚರಣೆ ಅಂಗವಾಗಿ ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಯಿತು.