ಬಾಗಲಕೋಟೆಯಲ್ಲಿ ಹೊರಗಡೆ ತಿರುಗಾಡುತ್ತಿದ್ದ ಇಬ್ಬರ ಮೇಲೆ ಪ್ರಕರಣ

ಬಾಗಲಕೋಟೆಯಲ್ಲಿ ಹೊರಗಡೆ ತಿರುಗಾಡುತ್ತಿದ್ದ ಇಬ್ಬರ ಮೇಲೆ ಪ್ರಕರಣ

YK   ¦    Mar 24, 2020 11:54:25 AM (IST)
ಬಾಗಲಕೋಟೆಯಲ್ಲಿ ಹೊರಗಡೆ ತಿರುಗಾಡುತ್ತಿದ್ದ ಇಬ್ಬರ ಮೇಲೆ ಪ್ರಕರಣ

ಬಾಗಲಕೋಟೆ: ಜಿಲ್ಲೆಯಲ್ಲಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವ ಇಬ್ಬರು ವ್ಯಕ್ತಿಗಳು ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿರುವದನ್ನು ಕಂಡು ವಶಕ್ಕೆ ಪಡೆದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.

  14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಲ್ಲಿರದೇ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ತಿರುಗಾಟ ನಡೆಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆದು ಅವರ ವಿರುದ್ದ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಕೊರೊನಾ ವೈರಸ್ಸಿನ ಲಕ್ಷಣಗಳು ಕಂಡು ಬರದೇ ಇದ್ದರು ಸಹ 14 ದಿನಗಳ ಕಾಲ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕು. ನಿಯಮ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಜಗಲಾಸರ ತಿಳಿಸಿದ್ದಾರೆ.