ಕಾಸರಗೋಡು: ಮಹಿಳೆ ಸಾವು

ಕಾಸರಗೋಡು: ಮಹಿಳೆ ಸಾವು

Aug 12, 2017 03:48:07 PM (IST)
ಕಾಸರಗೋಡು: ಮಹಿಳೆ ಸಾವು

ಕಾಸರಗೋಡು: ಏಕಾಂಗಿಯಾಗಿದ್ದ ಮಹಿಳೆ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಕಟ್ಟತಡ್ಕದಲ್ಲಿ ನಡೆದಿದೆ. ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿರುವ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆಯಿಶುಮ್ಮ (೫೨)ಎಂಬವರು ಮೃತ ಪಟ್ಟವರು. ಆಯಿಶುಮ್ಮ ಏಕಾಂಗಿಯಾಗಿ ಈ ಮನೆಯಲ್ಲಿ ವಾಸಿಸುತ್ತಿದ್ದು, ಪುತ್ರ ಮುಹಮ್ಮದ್ ಬಾಸಿತ್ (೧೯) ಪೆರಿಯಡ್ಕ ದರ್ಸ್ನಲ್ಲಿ ವಿದ್ಯಾರ್ಥಿಯಾಗಿದ್ದು, ಅಲ್ಲೇ ವಾಸಿಸುತ್ತಿದ್ದಾನೆ. ಆಯಿಶುಮ್ಮ ಮನೆ ಮನೆಗಳ ಕೆಲಸಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದರು. ಕಳೆದ ಆದಿತ್ಯವಾರ ಪುತ್ರ ಮನೆಗೆ ಬಂದಾಗ ಬಾಗಿಲು ಮುಚ್ಚಿಕೊಂಡ ಸ್ಥಿತಿಯಲ್ಲಿತ್ತು. ಇದರಿಂದ ತಾಯಿ ಕೆಲಸಕ್ಕೆ ತೆರಳಿರಬಹುದೆಂದು ಪುತ್ರ ಮರಳಿದ್ದ ನು.

ಶುಕ್ರವಾರ ರಾತ್ರಿ ಮುಹಮ್ಮದ್ ಬಾಸಿತ್ ಮತ್ತೆ ಮನೆಗೆ ಬಂದಿದ್ದು,ಈ ವೇಳೆಯೂ ಬಾಗಿಲು ಮುಚ್ಚಿಕೊಂಡಿತ್ತು. ಫೋನ್ ಕರೆಮಾಡಿದರೂ ತಾಯಿಂದ ಯಾವುದೇ ಪ್ರತಿಕ್ರಿಯೆ ಲಭಿಸದ ಹಿನ್ನೆಲೆಯಲ್ಲಿ ಕಿಟಿಕಿಯ ಗಾಜು ಮುರಿದು ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಆಯಿಶುಮ್ಮ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎರಡಂತಸ್ತಿನ ಮನೆಯೊಳಗೆ ಮಂಚದ ಕೆಳಗೆ ಮೃತದೇಹ ಕಂಡುಬಂದಿದ್ದು, ಜೀರ್ಣಿಸಿದ ಸ್ಥಿತಿಯಲ್ಲಿದೆ. ಆಹಾರ ತಯಾರಿಸಿ ಸೇವಿಸಿದ ಕುರುಹುಗಳೂ ಮನೆಯೊಳಗೆ ಪತ್ತೆಯಾಗಿದೆ. ಆದರೆ ಆಯಿಶುಮ್ಮರ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಇಂದು ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿಯಲಿದೆ. ಮೃತ ಆಯಿಶುಮ್ಮ ಮೂಲತಃ ಕರ್ನಾಟಕದ ಹುಬ್ಬಳ್ಳಿ ಬೀರಿಕೆರೆ ನಿವಾಸಿಯಾಗಿದ್ದು ವರ್ಷಗಳ ಹಿಂದೆ ಕಟ್ಟತ್ತಡ್ಕಕ್ಕೆ ಬಂದು ನೆಲೆಸಿದ್ದರು ಎನ್ನಲಾಗಿದೆ