ಅಂಗಡಿಗೆ ಕನ್ನ ಹಾಕಿದ ಆರೋಪಿ ಸೆರೆ

ಅಂಗಡಿಗೆ ಕನ್ನ ಹಾಕಿದ ಆರೋಪಿ ಸೆರೆ

SK   ¦    Jan 12, 2018 05:42:10 PM (IST)
ಅಂಗಡಿಗೆ ಕನ್ನ ಹಾಕಿದ ಆರೋಪಿ ಸೆರೆ

ಕಾಸರಗೋಡು: ಮಂಜೇಶ್ವರದಲ್ಲಿ ವಸ್ತ್ರ ಮಳಿಗೆಯ ಬೀಗ ಮುರಿದು ಹಣ ಕಳವು ಮಾಡಿದ ಪ್ರಕರಣದ ಆರೋಪಿಯೋರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಜೇಶ್ವರ ತೋಟ ತಲೆಕ್ಕಿಯ ಮುಹಮ್ಮದ್ ಬಶೀರ್(23) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಗಾಂಜಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ ಬಶೀರ್ ನನ್ನು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.

ಮಂಜೇಶ್ವರ ಮಜೀರ್ ಪಳ್ಳದ ಯಶವಂತ ಕುಮಾರ್ ಅವರ ವಸ್ತ್ರ ಮಳಿಗೆಯಿಂದ 41 ಸಾವಿರ ರೂ .ಕಳವು ಮಾಡಿದ್ದನು. ಡಿ .29ರಂದು ಕಳವು ನಡೆದಿತ್ತು. ಮಂಜೇಶ್ವರ ಪೊಲೀಸರು ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಯಿತು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.