ಕಾಸರಗೋಡು: ಮಳೆಗೆ ಮೂರನೇ ಬಲಿ

ಕಾಸರಗೋಡು: ಮಳೆಗೆ ಮೂರನೇ ಬಲಿ

SK   ¦    Jun 13, 2018 06:33:42 PM (IST)
ಕಾಸರಗೋಡು: ಮಳೆಗೆ ಮೂರನೇ ಬಲಿ

ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇದುವರೆಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದ್ದು, ತೋಟಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ.

ಮಧೂರು ಪಟ್ಲದ ಬಡುವನ್ ಕು೦ಞ(52) ಮೃತಪಟ್ಟವರು. ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೊಳೆ ಪಾಲಾಗಿದ್ದರು.

ಮನೆಗೆ ತಲುಪದೇ ಇದ್ದುದರಿಂದ ಮನೆಯವರು ಹುಡುಕಾಟ ನಡೆಸಿದ್ದು, ಬಳಿಕ ಹೊಳೆ ಪಾಲಾಗಿರಬಹುದು ಎಂಬ ಸಂಶಯದಿಂದ ಶೋಧ ನಡೆಸಲಾಗಿತ್ತು. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದರು.

ದಿನಗಳ ಹಿಂದೆ ಅಡೂರು ಚರ್ಲಕೈಯ ಚನಿಯ ನಾಯ್ಕ(65) ಗಾಳಿಮುಖ ಬಳಿಯ ಪಯಸ್ವಿನಿ ಹೊಳೆಯ ನೀರಿನ ಸೆಳೆತಕ್ಕೆ ಸಿಲುಕಿ ಮತ್ತು ಹೊಸದುರ್ಗ ಕುಶಾಲನಗರದ ಫಾತಿಮ ಕ್ವಾರ್ಟರ್ಸ್‌ನ ಫಾತಿಮತ್ ಸೈನಬಾ (4) ಮನೆ ಪಕ್ಕದ ಹೊಳೆ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಇದರಿಂದ ಮಳೆ ದುರಂತಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ.