ಕಾಸರಗೋಡು ಹೆದ್ದಾರಿ ದರೋಡೆಕೋರರ ಸೆರೆ

ಕಾಸರಗೋಡು ಹೆದ್ದಾರಿ ದರೋಡೆಕೋರರ ಸೆರೆ

SK   ¦    Jan 12, 2018 06:39:02 PM (IST)
ಕಾಸರಗೋಡು ಹೆದ್ದಾರಿ ದರೋಡೆಕೋರರ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದ 17 ವರ್ಷದ ಬಾಲಕ ಸೇರಿದಂತೆ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಬೆಜ್ಜಂಗಳದ ಮೊಯ್ದಿನ್ (21) ಮತ್ತು 17 ವರ್ಷದ ಬಾಲಕ ಒಳಗೊಂಡಿದ್ದಾನೆ.

ಹೊಸಂಗಡಿಯ ರಸ್ತೆ ಬದಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಪಾಲಕ್ಕಾಡ್ ನಿವಾಸಿಯನ್ನು ಬೆದರಿಸಿ ನಗದನ್ನು ದರೋಡೆ ಮಾಡಿದ್ದರು.

ಎರಡು ವಾರಗಳ ಹಿಂದೆ ರಾತ್ರಿ ಘಟನೆ ನಡೆದಿತ್ತು. ಉಳ್ಳಾಲದ ಮಸೀದಿಗೆ ತೆರಳಿ ಮರಳುತ್ತಿದ್ದಾಗ ಹಕೀಮ್ ಎಂಬವರು ಹೊಸಂಗಡಿ ರಸ್ತೆ ಬದಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ನಡುವೆ ಸ್ಕೂಟರ್ ನಲ್ಲಿ ಬಂದ ಇಬ್ಬರು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು.