ಕಾರ್ ಗೆ ಲಾರಿ ಡಿಕ್ಕಿ: ಮಹಿಳೆ ಸಾವು

ಕಾರ್ ಗೆ ಲಾರಿ ಡಿಕ್ಕಿ: ಮಹಿಳೆ ಸಾವು

CI   ¦    Jun 13, 2018 04:28:04 PM (IST)
ಕಾರ್ ಗೆ ಲಾರಿ ಡಿಕ್ಕಿ: ಮಹಿಳೆ ಸಾವು

ಮಡಿಕೇರಿ: ಲಾರಿ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ರಸ್ತೆಯ ಆನೆಕಾಡು ಬಳಿ ನಡೆದಿದೆ.

ಮಡಿಕೇರಿ ಸಮೀಪದ ಕಾಟಕೇರಿ ನಿವಾಸಿ ಫಿಲೋಮಿನಾ ಎಂಬುವವರೇ ಮೃತ ದುರ್ದೈವಿ. ಕಾರ್ ಚಲಾಯಿಸುತ್ತಿದ್ದ ಇವರ ಪುತ್ರ ಯೋಧ ಪ್ರವೀಣ್ ಡ್ಯಾನಿಯಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೈಸೂರಿನ ಡೋರ್ನಳ್ಳಿ ಚರ್ಚ್ ಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಪ್ರವೀಣ್ ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ಲಾರಿಯನ್ನು ಕಾರು ಹಿಂದಿಕ್ಕುವ ಸಂದರ್ಭ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

More Images