ಅಪಘಾತವಾಗಿ ರಸ್ತೆಯಲ್ಲಿ ಬಿದ್ದು ಕೆಲ ಕಾಲ ಒದ್ದಾಡಿದ ಬೈಕ್ ಸವಾರ: ಆಸ್ಪತ್ರೆಯಲ್ಲಿ ಸಾವು

ಅಪಘಾತವಾಗಿ ರಸ್ತೆಯಲ್ಲಿ ಬಿದ್ದು ಕೆಲ ಕಾಲ ಒದ್ದಾಡಿದ ಬೈಕ್ ಸವಾರ: ಆಸ್ಪತ್ರೆಯಲ್ಲಿ ಸಾವು

YK   ¦    Mar 13, 2018 04:02:45 PM (IST)
ಅಪಘಾತವಾಗಿ ರಸ್ತೆಯಲ್ಲಿ ಬಿದ್ದು ಕೆಲ ಕಾಲ ಒದ್ದಾಡಿದ ಬೈಕ್ ಸವಾರ: ಆಸ್ಪತ್ರೆಯಲ್ಲಿ ಸಾವು

ಬಳ್ಳಾರಿ: ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಬೈಕ್ ಸವಾರನೊಬ್ಬ ಪ್ರಾಣ ಉಳಿಸುವಂತೆ ರಸ್ತೆಯಲ್ಲಿ ಗೋಗರೆದು ಹೇಳುತ್ತಿದ್ದರು ಅಲ್ಲಿಂದ್ದ ಜನರು ಸಹಾಯ ಮಾಡದೇ ಕೊನೆಗೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಫಕ್ರುದ್ದೀನ್ ಸಂಡೂರಿನ ನಿವಾಸಿ ಎಂದು ಗುರುತಿಸಲಾಗಿದೆ.

ಈತ ಸೋಮವಾರ ಸಂಜೆ ಸಂಡೂರಿನಿಂದ ಹೊಸಪೇಟೆಗೆ ತೆರಳುತ್ತಿದ್ದ ವೇಳೇ ಫಕ್ರುದ್ದೀನ್ ಬೈಕ್ ಹಾಗೂ ಟಿಪ್ಪರ್ ಲಾರಿಯೊಂದ ನಡುವೆ ಅಪಘಾತವಾಗಿದೆ. ಇದರಿಂದ ಫಕ್ರುದ್ದೀನ್ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಗೋಗರೆದು ಆಸ್ಪತ್ರೆಗೆ ಸೇರಿಸಿ ಎಂದು ಕೇಳಿದ್ದರು ಎನ್ನಲಾಗಿದೆ. ಕೊನೆಗೆ ಲಾರಿ ಚಾಲಕರು ನೀರು ಕುಡಿಸಿ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ತಡವಾದ ಕಾರಣ ಫಕ್ರುದ್ದೀನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಘಟನೆಯ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಅಲ್ಲಿಂದ್ದ ಜನರು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಗೋಗರೆಯುತ್ತಿದ್ದ ದೃಶ್ಯವನ್ನು ಸೆರೆಹಿಡಿಯುವಲ್ಲಿ ಜನರು ನಿರತರಾಗಿದ್ದರೇ ವಿನಃ ಯಾರಿಬ್ಬರೂ ಸಹಾಯ ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ರೀತಿಯಾ ಘಟನಾವಳಿಗಳು ಈ ಹಿಂದೆಯೂ ನಡೆದಿತ್ತು.