ಶ್ರೀಗಳಿಗೆ ಸಚಿವ ಸಿಟಿ ರವಿಯಿಂದ ಸರ್ವಜ್ಞ ವಚನದ ಪಾಠ

ಶ್ರೀಗಳಿಗೆ ಸಚಿವ ಸಿಟಿ ರವಿಯಿಂದ ಸರ್ವಜ್ಞ ವಚನದ ಪಾಠ

CI   ¦    Sep 12, 2019 06:05:10 PM (IST)
ಶ್ರೀಗಳಿಗೆ ಸಚಿವ ಸಿಟಿ ರವಿಯಿಂದ ಸರ್ವಜ್ಞ ವಚನದ ಪಾಠ

ಮಡಿಕೇರಿ: ಒಕ್ಕಲಿಗರ ವಿರುದ್ದ ಮೇಲೆ ಬಿಜೆಪಿ ದ್ವೇಷ ಸಾಧಿಸ್ತಿದೆ ಎಂಬ ತಂಜಾವೂರು ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ,   ಶ್ರೀಗಳಿಗೆ ಸರ್ವಜ್ಞನ ವಚನದ ಪಾಠ ಮಾಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ..? ಜಾತಿ ವಿಜಾತಿ ಎನಬೇಡ, ಜಾತ ಒಲಿದಾತನೇ ಸರ್ವಜ್ಞ ಜಾತಿಯಿಂದ ಯಾರೂ ಕೂಡ ದೊಡ್ಡವರಾಗಲ್ಲ, ನೀತಿಯಿಂದ ಮಾತ್ರ ದೊಡ್ಡವರಾಗ್ತಾರೆ . ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಡಿ.ಕೆ.ಶಿವಕುಮಾರ್  ಬಂಧನವಾಗಿರುವುದು ಅವರ ಜಾತಿ ಯಾವ ಕಾರಣಕ್ಕೆ ಅಂತಲ್ಲ, ಇ.ಡಿ.ಗೆ ಯಾವುದೇ ಜಾತಿ ಇಲ್ಲ. ಪ್ರಾಮಾಣಿಕರ ಮನೆಯಲ್ಲಿ ಕೋಟಿ ಗಟ್ಟಲೆ ಹಣ ಇರೋಕೆ ಸಾಧ್ಯ ಇದೆಯಾ...ಎಂಬ  ಪ್ರಶ್ನೆಗೆ ಉತ್ತರ ಹುಡುಕಿದರೆ, ಸಮುದಾಯ ಮಾಡುತ್ತಿರುವುದು  ಸರಿಯಾ ತಪ್ಪಾ ಗೊತ್ತಾಗುತ್ತೆ ಎಂದರಲ್ಲದೇ, ಈ ಪ್ರಶ್ನೆಗೆ ಉತ್ತರ ಹುಡುಕದೇ ಇದ್ದರೆ  ಜಾತಿ ಹೆಸರಿನಲ್ಲಿ ಭ್ರಷ್ಟಾಚಾರಿಗಳು  ಆಶ್ರಯ  ಪಡೆಯುತ್ತಾರೆ ಎಂದು ಹೇಳಿದರು.

ಕುಂಬಳಕಾಯಿ ಕಳ್ಳ ಅಂದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು  ಎಂದು ಪ್ರಶ್ನಿಸಿದ ಸಿ.ಟಿ.ರವಿ, ಪ್ರಾಮಾಣಿಕರಿಗೆ ಏನೂ ತೊಂದರೆ ಆಗಲ್ಲ, ಆದರೆ  ಸೂಕ್ತ ಉತ್ತರದಾಯಿತ್ಯ ಕೊಡುವ ಅಗತ್ಯವಿದೆ. ಯಾರೇ ಭ್ರಷ್ಟಾಚಾರ ಮಾಡಿದ್ರೂ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. ಒಮ್ಮೆ ವ್ಯವಸ್ಥೆ ಸ್ವಚ್ಚವಾಗಬೇಕು.. ಈ ಸ್ವಚ್ಚತಾ ಕಾರ್ಯಕ್ಕೆ  ಪ್ರತಿಭಟನೆಗೆ ಬಂದಿರುವುದಕ್ಕಿಂದ ಹೆಚ್ಚು ಜನ ಒಂದಾಗ್ಬೇಕು ಎಂದು ಹೇಳಿದರು.