ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆಯ ಕಲರವ

ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆಯ ಕಲರವ

CI   ¦    Nov 14, 2017 06:22:51 PM (IST)
ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆಯ ಕಲರವ

ಮಡಿಕೇರಿ: ನಗರದ ಯುರೋಕಿಡ್ಸ್ ಪಬ್ಲಿಕ್ ಸ್ಕೂಲ್ ನ ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳ ದಿನಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಛದ್ಮವೇಷ ಸ್ಪರ್ಧೆ, ದೇಶಭಕ್ತಿ, ಜಾನಪದ, ಗಾಯನ ಸ್ಪರ್ಧೆ, ಬಣ್ಣ ಹಾಕುವ ಸ್ಪರ್ಧೆ, ಕ್ಲೇ ಮಾಡಲಿಂಗ್ ಹಾಗೂ ರೈಮ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರರು ಕೂಡ ಹಾಡು ಮತ್ತು ನೃತ್ಯದ ಮೂಲಕ ಮಕ್ಕಳ ಮನರಂಜಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಡುಗೊರೆ ಮತ್ತು ಸಿಹಿಯನ್ನು ಹಂಚಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಲಾಯಿತು.

ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಪ್ರಮುಖರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಹಾಜರಿದ್ದರು.

More Images