ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ: ಪಕ್ಷದ ನಾಯಕರಿಂದ ಬಹಿರಂಗ ಹೇಳಿಕೆ

ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ: ಪಕ್ಷದ ನಾಯಕರಿಂದ ಬಹಿರಂಗ ಹೇಳಿಕೆ

HSA   ¦    May 25, 2019 02:39:38 PM (IST)
ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ: ಪಕ್ಷದ ನಾಯಕರಿಂದ ಬಹಿರಂಗ ಹೇಳಿಕೆ

ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಿರ್ನಾಮವಾಗಲಿದೆ ಎಂದು ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ.

ಜೆಡಿಎಸ್ ನೊಂದಿಗಿನ ಮೈತ್ರಿಯನ್ನು ಮುರಿದು ಹೊರಬರದೆ ಇದ್ದರೆ ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಗೆ ಇಂತಹ ಹೀನಾಯ ಸ್ಥಿತಿ ಹಿಂದೆಂದಿಗೂ ಬಂದಿಲ್ಲ. ಸರ್ಕಾರದಿಂದಾಗಿ ಜೆಡಿಎಸ್ ಆರ್ಥಿಕವಾಗಿ ಸದೃಢವಾಗಿದೆ. ಇದರಿಂದ ಮಂಡ್ಯದಲ್ಲಿ 150 ಕೋಟಿ, ತುಮಕೂರಿನಲ್ಲಿ 80 ಮತ್ತು ಹಾಸನದಲ್ಲಿ 60 ಕೋಟಿ ಹಣ ಖರ್ಚು ಮಾಡಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 37 ಸ್ಥಾನ ಹೊಂದಿರುವಂತಹ ಜೆಡಿಎಸ್ ಮುಖ್ಯಮಂತ್ರಿ ಕುರ್ಚಿ ಪಡೆದಿದೆ. 105 ಸ್ಥಾನ ಪಡೆದವರು ಸರ್ಕಾರ ರಚನೆ ಮಾಡಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ ಎಂದರು.