ಅಕ್ರಮ ಜೂಜಾಟ: ಏಳು ಮಂದಿಯ ಬಂಧನ

ಅಕ್ರಮ ಜೂಜಾಟ: ಏಳು ಮಂದಿಯ ಬಂಧನ

RK   ¦    Dec 07, 2017 04:19:03 PM (IST)
ಅಕ್ರಮ ಜೂಜಾಟ: ಏಳು ಮಂದಿಯ ಬಂಧನ

ಚಿಕ್ಕಮಗಳೂರು: ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ಏಳು ಮಂದಿ ಆರೋಫಿಗಳನ್ನು ಕಡೂರು ತಾಲೂಕಿನ ಯಗಟಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಯಳ್ಳಂಬಳಸೆಯ ಆನಂದ(40), ಚಿಕ್ಕನಾಯ್ಕನಹಳ್ಳಿಯ ನಂಜುಂಡಪ್ಪ(58), ಯಳ್ಳಂಬಳಸೆಯ ಸೈಯ್ಯದ್ ಆರೀಫ್(50), ರಂಗಪ್ಪ(73), ವೈಮೈಲಾಪುರದ ಶೇಖರಪ್ಪ (45), ಕರೀಂ(61), ಮಲ್ಲಪ್ಪ(60) ಬಂಧಿತರಾಗಿದ್ದಾರೆ.

ಆರೋಫಿಗಳು ಯಳ್ಳಂಬಳೆ ಗ್ರಾಮದ ರಾಜಣ್ಣ ಎಂಬವರ ತೆಂಗಿನ ತೋಟದ ಬಳಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 1820 ರೂ.ಗಳ ನಗುದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.