ಶಿವಕುಮಾರ ಸ್ವಾಮೀಜಿಗಳ ಲಿಂಗಶರೀರದ ಕ್ರಿಯಾ ಸಮಾಧಿ ವಿಧಿವಿಧಾನ ಆರಂಭ

ಶಿವಕುಮಾರ ಸ್ವಾಮೀಜಿಗಳ ಲಿಂಗಶರೀರದ ಕ್ರಿಯಾ ಸಮಾಧಿ ವಿಧಿವಿಧಾನ ಆರಂಭ

HSA   ¦    Jan 22, 2019 02:53:53 PM (IST)
ಶಿವಕುಮಾರ ಸ್ವಾಮೀಜಿಗಳ ಲಿಂಗಶರೀರದ ಕ್ರಿಯಾ ಸಮಾಧಿ ವಿಧಿವಿಧಾನ ಆರಂಭ

ತುಮಕೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಿನ್ನೆ ಶಿವೈಕ್ಯರಾಗಿದ್ದು, ಅಂತಿಮದರ್ಶನವು ಇಂದು ಸಂಜೆ ಆರು ಗಂಟೆ ತನಕ ನಡೆಯಲಿದೆ.

ಇದರ ಬಳಿಕ ಶ್ರೀಗಳ ಲಿಂಗಶರೀರದ ಕ್ರಿಯಾ ಸಮಾಧಿ ವಿಧಿವಿಧಾನಗಳು ಜರುಗಲಿದೆ.

ಈಗಾಗಲೇ ಲಿಂಗಶರೀರದ ಕ್ರಿಯಾ ಸಮಾಧಿಗೆ ವಿಧಿವಿಧಾನಗಳು ಆರಂಭಗೊಂಡಿದೆ. 20ಕ್ಕೂ ಹೆಚ್ಚು ಸ್ವಾಮೀಜಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಲಕ್ಷಾಂತರ ಮಂದಿ ಸಿದ್ಧಗಂಗಾ ಶ್ರೀಗಳ ಅಂತಿಮದರ್ಶನಕ್ಕಾಗಿ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನದ ಅವಧಿಯನ್ನು ಸಂಜೆ ಆರು ಗಂಟೆ ತನಕ ವಿಸ್ತರಿಸಲಾಗಿದೆ.