ಕಾರವಾರದಲ್ಲಿ ಭಾರೀ ಮಳೆ: ಮನೆಯೊಳಗೆ ನುಗ್ಗಿದ ನೀರು

ಕಾರವಾರದಲ್ಲಿ ಭಾರೀ ಮಳೆ: ಮನೆಯೊಳಗೆ ನುಗ್ಗಿದ ನೀರು

SB   ¦    Jun 23, 2019 01:20:32 PM (IST)
ಕಾರವಾರದಲ್ಲಿ ಭಾರೀ ಮಳೆ:  ಮನೆಯೊಳಗೆ ನುಗ್ಗಿದ ನೀರು

ಕಾರವಾರ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೆಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು ಸುಮಾರು ೫೦ಕ್ಕೂ ಹೆಚ್ಚಿನ ಮನೆಗಳಿಗೆನೀರು ನುಗ್ಗಿದ್ದು ಜನರು ಅತಂತ್ರರಾಗಿದ್ದಾರೆ. ಇದರಿಂದ ಮನೆಯಲ್ಲಿನ ಸಾಮಗ್ರಿ, ವಿದ್ಯುತ್ ಉಪಕರಣಗಳು ಹಾಳಾಗಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

ಐಆರ್ ಬಿ ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನಲೆಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಸಮರ್ಪಕವಾದ ಹಿನ್ನಲೆಯಲ್ಲಿ ನೀರು ಸಾಗದೆ ಮನೆಗಳಿಗೆ ನೀರು ನುಗ್ಗಿತ್ತು. ಕೋಟೆವಾಡಾದ ಲಿಂಬುಚಾಳ ಹಾಗೂ ಶಿವಾಜಿವಾಸ್ಟರ್ವಾಡಾಗಳಲ್ಲಿ ಕೃತಕ ನೆರೆ ಸೃಷ್ಠಿಯಾದ ಪರಿಣಾಮ ಗ್ರಾಮಸ್ಥರು ಆತಂಕ ಎದುರಿಸುವಂತಾಯಿತು.

ಪಾಂಡುರಂಗ ವಾಸ್ಟರ್, ಜಲಿಲ್ ಖಾನ್, ಉಸೇನ್ ಖಾನ್, ರಫೀಖ್ ಶೇಖ್, ಲೀಲಮ್ಮ ಹರಿಕಂತ್ರ ಅವರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಆಸ್ತಿ - ಪಾಸ್ತಿ ಹಾನಿಯಾಗಿದೆ. ಪಾಂಡುರಂಗ ಅವರ ಮನೆಯಲ್ಲಿದ್ದ ಫ್ರಿಡ್ಜ್, ಮಿಕ್ಸರ್, ಟಿವಿ ಹಾಗೂ ಇನ್ನಿತರ ವಸ್ತುಗಳಿಗೆ ಹಾನಿಯಾಗಿದೆ.

ಅಂಕೋಲಾದ ಲಿಂಬುಚಾಳದಲ್ಲಿರುವ ೮ ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಇಲ್ಲಿಯ ಚಾಳ್ನ ಜನತೆ ಆತಂಕಕ್ಕೆ ಸಿಲುಕುವಂತಾಯಿತು. ಮನೆಯೊಳಗೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮನೆಯಲ್ಲಿದ್ದ ಮಕ್ಕಳನ್ನು ಎತ್ತುಕೊಂಡು ಬೇರೆಡೆಗೆ ಸ್ಥಳಾಂತರಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಅವೈಜ್ಞಾನಿಕ ಕಾಮಗಾರಿ ಹಾಗೂ ಮಳೆ ನೀರು ಸಾಗಲು ಸಮರ್ಪಕವಾದ ಕಾಲುವೆಗಳನ್ನು ಮಾಡದ ಹಿನ್ನೆಲೆಯಲ್ಲಿ ಪ್ರಾರಂಭದಮಳೆಯಲ್ಲೇ ಜನವಸತಿ ಪ್ರದೇಶಗಳು ಜಲಾವೃತಗೊಂಡಿದೆ. ಇದು ಐಆರ್ಬಿಯ ಅವೈಜ್ಞಾನಿಕ ಕಾಮಗಾರಿಯಿಂದೇ ಈ ರೀತಿಯಾಗಿದ್ದು ಎನ್ನುವುದು ಸ್ಥಳೀಯರ ಆರೋಪವಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಾಗಿದೆ.

 

More Images