ಕಾಡಾನೆಯಿಂದ ಹಿಮವದ್ ಗೋಪಾಲಸ್ವಾಮಿಗೆ ದಿನಲೂ ವಿಶೇಷ ಪೂಜೆ

ಕಾಡಾನೆಯಿಂದ ಹಿಮವದ್ ಗೋಪಾಲಸ್ವಾಮಿಗೆ ದಿನಲೂ ವಿಶೇಷ ಪೂಜೆ

YK   ¦    Dec 07, 2017 03:32:29 PM (IST)
ಕಾಡಾನೆಯಿಂದ ಹಿಮವದ್ ಗೋಪಾಲಸ್ವಾಮಿಗೆ ದಿನಲೂ ವಿಶೇಷ ಪೂಜೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಪವಿತ್ರ ಕ್ಷೇತ್ರವೂ ಆಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಘಟನೆ ನಡೆಯುತ್ತಿದೆ.

ಅದೇನೆಂದರೆ ಇಲ್ಲಿಗೆ ಪ್ರತಿದಿನವೂ ಕಾಡಾನೆಯೊಂದು ಸಂಜೆ ಹೊತ್ತಿನಲ್ಲಿ ದೇವಾಲಯಕ್ಕೆ ಬಂದು ನಮಿಸುವುದರೊಂದಿಗೆ ಪ್ರಸಾದ ತಿಂದು ಹೋಗುತ್ತಿದೆಯಂತೆ. ಈ ವಿಚಾರ ಎಲ್ಲೆಡೆ ಹರಡಿದ್ದು ಅದೇ ಸುದ್ದಿಗಳು ಜನರ ಬಾಯಲ್ಲಿ ಕೇಳಿ ಬರುತ್ತಿದೆ.

ಹಗಲು ಹೊತ್ತಿನಲ್ಲಿ ಅಂದರೆ ಭಕ್ತರು ಇರುವ ವೇಳೆಗೆ ಇಲ್ಲಿಗೆ ಈ ಕಾಡಾನೆ ಬರುವುದಿಲ್ಲವಂತೆ. ಸಂಜೆ 5ಗಂಟೆಗೆ ದೇವಾಲಯದ ಬಾಗಿಲನ್ನು ಹಾಕಲಾಗುತ್ತದೆ. ಆ ನಂತರ ಈ ಕಾಡಾನೆ ಬಂದು ಅಲ್ಲಿರುವ ಪ್ರಸಾದ ಮತ್ತು ಬಾಳೆಹಣ್ಣು, ತೆಂಗಿನಕಾಯಿಯನ್ನು ತಿಂದು ಹೋಗುತ್ತಿದೆಯಂತೆ.

ಕಾಡಾನೆ ದೇವಾಲಯಕ್ಕೆ ಬರುತ್ತಿರುವ ವಿಚಾರದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಲ್ಲಿರುವ ಕಾವಲುಗಾರರ ಪ್ರಕಾರ ಕೆಲವು ದಿನಗಳಿಂದ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುತ್ತಿದ್ದು ಬಸ್ಸುಗಳು ಹಾಗೂ ಭಕ್ತರು ದೇವಾಲಯದಿಂದ ತಮ್ಮ ಊರುಗಳಿಗೆ ತೆರಳುತ್ತಾರೆ. ಆ ನಂತರ ದೇವಾಲಯಕ್ಕೆ ಬರುವ ಕಾಡಾನೆ ದೇಗುಲದ ಮೆಟ್ಟಿಲುಗಳನ್ನೇರಿ ದೇವಸ್ಥಾನದ ಒಂದು ಪಾರ್ಶ್ವದಲ್ಲಿ ಭಕ್ತರು ಸೇವಿಸಿ ಬಿಟ್ಟ ಪ್ರಸಾದ, ಬಾಳೆಲೆ, ತರಕಾರಿ, ಹಣ್ಣು ಕಾಯಿಗಳನ್ನು ತಿಂದು ಹೋಗುತ್ತಿದೆಯಂತೆ.

ಈ ವೇಳೆ ಬೆರಳೆಣಿಕೆಯಷ್ಟು ಭಕ್ತರು, ಕಾವಲುಗಾರರು, ಬಸ್ ಚಾಲಕ ನಿವರ್ಾಹಕರು ಹಾಗೂ ಅರ್ಚಕರು ಇದ್ದರೂ ಯಾರಿಗೂ ತೊಂದರೆ ನೀಡದೆ ಪ್ರಸಾದ ತಿಂದು ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ ದಿನಲೂ ನಡೆಯುತ್ತೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಪವಿತ್ರ ಕ್ಷೇತ್ರವೂ ಆಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಘಟನೆ ನಡೆಯುತ್ತಿದೆ. ಅದೇನೆಂದರೆ ಇಲ್ಲಿಗೆ ಪ್ರತಿದಿನವೂ ಕಾಡಾನೆಯೊಂದು ಸಂಜೆ ಹೊತ್ತಿನಲ್ಲಿ ದೇವಾಲಯಕ್ಕೆ ಬಂದು ನಮಿಸುವುದರೊಂದಿಗೆ ಪ್ರಸಾದ ತಿಂದು ಹೋಗುತ್ತಿದೆಯಂತೆ. ಈ ವಿಚಾರ ಎಲ್ಲೆಡೆ ಹರಡಿದ್ದು ಅದೇ ಸುದ್ದಿಗಳು ಜನರ ಬಾಯಲ್ಲಿ ಕೇಳಿ ಬರುತ್ತಿದೆ.

ಹಗಲು ಹೊತ್ತಿನಲ್ಲಿ ಅಂದರೆ ಭಕ್ತರು ಇರುವ ವೇಳೆಗೆ ಇಲ್ಲಿಗೆ ಈ ಕಾಡಾನೆ ಬರುವುದಿಲ್ಲವಂತೆ. ಸಂಜೆ 5ಗಂಟೆಗೆ ದೇವಾಲಯದ ಬಾಗಿಲನ್ನು ಹಾಕಲಾಗುತ್ತದೆ. ಆ ನಂತರ ಈ ಕಾಡಾನೆ ಬಂದು ಅಲ್ಲಿರುವ ಪ್ರಸಾದ ಮತ್ತು ಬಾಳೆಹಣ್ಣು, ತೆಂಗಿನಕಾಯಿಯನ್ನು ತಿಂದು ಹೋಗುತ್ತಿದೆಯಂತೆ.

ಕಾಡಾನೆ ದೇವಾಲಯಕ್ಕೆ ಬರುತ್ತಿರುವ ವಿಚಾರದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಲ್ಲಿರುವ ಕಾವಲುಗಾರರ ಪ್ರಕಾರ ಕೆಲವು ದಿನಗಳಿಂದ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುತ್ತಿದ್ದು ಬಸ್ಸುಗಳು ಹಾಗೂ ಭಕ್ತರು ದೇವಾಲಯದಿಂದ ತಮ್ಮ ಊರುಗಳಿಗೆ ತೆರಳುತ್ತಾರೆ. ಆ ನಂತರ ದೇವಾಲಯಕ್ಕೆ ಬರುವ ಕಾಡಾನೆ ದೇಗುಲದ ಮೆಟ್ಟಿಲುಗಳನ್ನೇರಿ ದೇವಸ್ಥಾನದ ಒಂದು ಪಾರ್ಶ್ವದಲ್ಲಿ ಭಕ್ತರು ಸೇವಿಸಿ ಬಿಟ್ಟ ಪ್ರಸಾದ, ಬಾಳೆಲೆ, ತರಕಾರಿ, ಹಣ್ಣು ಕಾಯಿಗಳನ್ನು ತಿಂದು ಹೋಗುತ್ತಿದೆಯಂತೆ.

ಈ ವೇಳೆ ಬೆರಳೆಣಿಕೆಯಷ್ಟು ಭಕ್ತರು, ಕಾವಲುಗಾರರು, ಬಸ್ ಚಾಲಕ ನಿರ್ವಾಹಕರು ಹಾಗೂ ಅರ್ಚಕರು ಇದ್ದರೂ ಯಾರಿಗೂ ತೊಂದರೆ ನೀಡದೆ ಪ್ರಸಾದ ತಿಂದು ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ

More Images