ಗುಡ್ಡ ಕುಸಿಯುವ ಭೀತಿಯಲ್ಲಿ ಚಂದ್ರಗಿರಿ ಜಂಕ್ಷನ್: ಸಂಚಾರಕ್ಕೆ ನಿಯಂತ್ರಣ

ಗುಡ್ಡ ಕುಸಿಯುವ ಭೀತಿಯಲ್ಲಿ ಚಂದ್ರಗಿರಿ ಜಂಕ್ಷನ್: ಸಂಚಾರಕ್ಕೆ ನಿಯಂತ್ರಣ

SK   ¦    Aug 13, 2019 05:27:25 PM (IST)
ಗುಡ್ಡ ಕುಸಿಯುವ ಭೀತಿಯಲ್ಲಿ ಚಂದ್ರಗಿರಿ ಜಂಕ್ಷನ್: ಸಂಚಾರಕ್ಕೆ ನಿಯಂತ್ರಣ

ಕಾಸರಗೋಡು: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಕಾಸರಗೋಡು - ಕಾಞ೦ಗಾಡ್ ರಾಜ್ಯ ಹೆದ್ದಾರಿಯ ಚಂದ್ರಗಿರಿ ಜಂಕ್ಷನ್ ಸಮೀಪ ಗುಡ್ಡ ಕುಸಿಯುವ ಸಾಧ್ಯತೆ ಇದ್ದು , ಇದರಿಂದ ಈ ರಸ್ತೆಯಾಗಿ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ .

ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮಣ್ಣು ಕುಸಿಯುವ ಸಾಧ್ಯತೆ ಇರುವುದನ್ನು ಗಮನಿಸಿ ಈ ಹಿಂದೆಯೇ ಒಂದು ಭಾಗದಲ್ಲಿ ಕಗ್ಗಲ್ಲು ಕಟ್ಟಲಾಗಿತ್ತು.

ಈ ಸ್ಥಳದಲ್ಲೇ ಬಿರುಕು ಕಂಡು ಬಂದಿದೆ . ಇದರಿಂದ ಈ ದಾರಿಯಾಗಿ ಪ್ರಯಾಣಿಸುವವರಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಮಳೆ ತೀವ್ರ ಗೊಂಡಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.