ಗೌರಿಬಿದನೂರು ವೃದ್ಧೆ ಮಹಿಳೆ ಕೋವಿಡ್- ೧೯ಕ್ಕೆ ಬಲಿ: ಸಚಿವ ಶ್ರೀರಾಮುಲು ಸ್ಪಷ್ಟನೆ

ಗೌರಿಬಿದನೂರು ವೃದ್ಧೆ ಮಹಿಳೆ ಕೋವಿಡ್- ೧೯ಕ್ಕೆ ಬಲಿ: ಸಚಿವ ಶ್ರೀರಾಮುಲು ಸ್ಪಷ್ಟನೆ

YK   ¦    Mar 26, 2020 12:13:20 PM (IST)
ಗೌರಿಬಿದನೂರು ವೃದ್ಧೆ ಮಹಿಳೆ ಕೋವಿಡ್- ೧೯ಕ್ಕೆ ಬಲಿ: ಸಚಿವ ಶ್ರೀರಾಮುಲು ಸ್ಪಷ್ಟನೆ

ಬಳ್ಳಾರಿ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೃದ್ಧೆಯು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ವೈದ್ಯರೊಂದಿಗೆ ಸಭೆ ನಡೆಯುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ರಾಜ್ಯದಲ್ಲಿ ಕೋವಿಡ್ ೧೯ ಸೋಂಕಿಗೆ ಮೃತಪಟ್ಟವರ ಸಂಖ್ಯೆ ೨ಕ್ಕೆ ಏರಿದೆ. ಈಗಾಗಲೇ ೧.೩೦ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ ೫೨ಮಂದಿಗೆ ಸೋಂಕಿರುವುದು ತಿಳಿದುಬಂದಿದೆ.

ಭಾರತ ಲಾಕ್ ಡೌನ್ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.