ಕಾಡಾನೆ ದಾಳಿಗೆ ಮನೆ ಹೊರಗಡೆ ಮಲಗಿದ್ದ ಮಹಿಳೆ ಬಲಿ

ಕಾಡಾನೆ ದಾಳಿಗೆ ಮನೆ ಹೊರಗಡೆ ಮಲಗಿದ್ದ ಮಹಿಳೆ ಬಲಿ

YK   ¦    Jun 22, 2019 05:27:25 PM (IST)
ಕಾಡಾನೆ ದಾಳಿಗೆ ಮನೆ ಹೊರಗಡೆ ಮಲಗಿದ್ದ ಮಹಿಳೆ ಬಲಿ

ಛತ್ತೀಸ್ ಘರ್ : ಮನೆಯ ಹೊರಗಡೆ ಮಲಗಿದ್ದ ಮಹಿಳೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಕೊಂದು ಹಾಕಿದ ಘಟನೆ ಶುಕ್ರವಾರ ತಡರಾತ್ರಿ ಛತ್ತೀಸ್ ಘರ್ ನ  ರಾಯಗರ್ ಜಿಲ್ಲೆಯಲ್ಲಿ ನಡೆದಿದೆ.

ಇದು ಈ ತಿಂಗಳಿನಲ್ಲಿ ರಾಯಗರ್ ಪ್ರದೇಶದಲ್ಲಿ ಕಾಡಾನೆ ದಾಳಿಗೆ ನಡೆದ ಐದನೇ ಸಾವಾಗಿದೆ.

ಶುಕ್ರವಾರ ರಾತ್ರಿ ಕೌಹಜೋಹಾ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತ  ಮಹಿಳೆಯನ್ನು ಮಂಗ್ಲಿ ಬಾಯ್ (55) ಎಂದು ಗುರುತಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಪ್ರಾದೇಶಿಕ ಅರಣ್ಯಾಧಿಕಾರಿ ಪ್ರಣಯ್ ಮಿಶ್ರಾ, ಶುಕ್ರವಾರ ರಾತ್ರಿ ಮಹಿಳೆ  ಮನೆಯ ಹೊರಭಾಗದಲ್ಲಿ ಮಲಗಿದ್ದ ವೇಳೆ ಆನೆ ದಾಳಿ ನಡೆಸಿದೆ. ಈ ವೇಳೆ ಸೊಂಡಿಲಿನಿಂದ ಮಹಿಳೆಯನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದು ಕೊಂದು ಹಾಕಿದೆ ಎಂದು ವಿವರಿಸಿದ್ದಾರೆ.

ಇದು ರಾಯಗರ್  ಕಾಡಾನೆ ದಾಳಿಗೆ ನಡೆದ ಐದನೇ ಸಾವಾಗಿದೆ. ಈ ಪ್ರದೇಶದಲ್ಲಿ ಕೆಲ ದಿನಗಳಿಂದ 16 ಆನೆಗಳ ಗುಂಪೊಂದು ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದರು.