ಕಲಬುರ್ಗಿಯಲ್ಲಿ ಕನ್ನಡ ವಿರೋಧಿ ಘೋಷಣೆ: ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕರವೇ ಅಗ್ರಹ

ಕಲಬುರ್ಗಿಯಲ್ಲಿ ಕನ್ನಡ ವಿರೋಧಿ ಘೋಷಣೆ: ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕರವೇ ಅಗ್ರಹ

CI   ¦    Mar 13, 2018 12:43:23 PM (IST)
ಕಲಬುರ್ಗಿಯಲ್ಲಿ ಕನ್ನಡ ವಿರೋಧಿ ಘೋಷಣೆ: ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕರವೇ ಅಗ್ರಹ

ಸೋಮವಾರಪೇಟೆ: ಇತ್ತೀಚೆಗೆ ಕಲುಬುರ್ಗಿಯಲ್ಲಿ ಕೆಲ ಕಿಡಿಗೇಡಿಗಳು ಕನ್ನಡ ವಿರೋಧಿ ಘೋಷಣೆ ಯನ್ನು ಕೂಗಿ ಸಂವಿಧಾನ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸೋಮವಾರ ಇಲ್ಲಿನ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಕಲುಬುರ್ಗಿಯ ಮಹಾನಗರ ಪಾಲಿಕೆಯಲ್ಲಿ ಕನ್ನಡ ನಾಮಫಲಕಗಳಿಗೆ ಮಸಿಯನ್ನು ಬಳಿದು ಉರ್ದು ಭಾಷೆಯನ್ನು ಬರೆಯಲಾಗಿರುವ ಕ್ರಮ ಖಂಡನೀಯ. ಉರ್ದು ಭಾಷಿಕರು ಅಲ್ಲಿ ಬಹುಸಂಖ್ಯಾರಾಗಿರುವ ಕಾರಣ ಕನ್ನಡ ಭಾಷೆಯನ್ನು ಬದಿಗಿಟ್ಟು ಉರ್ದು ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಘೋಷಣೆ ಕೂಗಿರುವ ಕ್ರಮವೂ ಹಾಸ್ಯಸ್ಪದವಾಗಿದೆ. ಭಾಷಾ ಭಾವೈಕ್ಯತೆಗೆ ಧಕ್ಕೆ ತರುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ತಾಲೂಕು ಅಧ್ಯಕ್ಷ ಕೆ.ಎನ್.ದೀಪಕ್ ಆಗ್ರಹಿಸಿದರು.

ಮನವಿ ಪತ್ರವನ್ನು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭ ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ಪದಾಧಿಕಾರಿಗಳಾದ ರೋಹಿತ್ಗೌಡ, ಚಂದ್ರು, ಲೋಕೇಶ್ಗೌಡ, ಜಗನಾಥ್, ಶರತ್, ಸತೀಶ್ ಮತ್ತಿತರರು ಇದ್ದರು.