ಗೋಕರ್ಣ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ: ಜಿಲ್ಲಾಧಿಕಾರಿಗೆ ಲೀಗಲ್ ನೋಟಿಸ್

ಗೋಕರ್ಣ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ: ಜಿಲ್ಲಾಧಿಕಾರಿಗೆ ಲೀಗಲ್ ನೋಟಿಸ್

SB   ¦    Oct 11, 2018 08:27:59 PM (IST)
ಗೋಕರ್ಣ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ: ಜಿಲ್ಲಾಧಿಕಾರಿಗೆ ಲೀಗಲ್ ನೋಟಿಸ್

ಕಾರವಾರ: ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರಿಸದ ಕಾರಣಕ್ಕಾಗಿ ಮಠದ ಪರ ವಕೀಲ ನಾಗರಾಜ ನಾಯಕ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.

2018ರ ಅಕ್ಟೊಬರ್ 3ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 7 ಸೆಪ್ಟೆಂಬರ್ 2108ರ ಪೂರ್ವದಲ್ಲಿ ದೇವಸ್ಥಾನದಲ್ಲಿ ಇದ್ದ ವ್ಯವಸ್ಥೆಯನ್ನೇ ಜಾರಿಗೆ ತರಬೇಕು ಎಂದು ಹೇಳಿದೆ. 7 ಸೆಪ್ಟೆಂಬರ್ 2018ರ ಪೂರ್ವದಲ್ಲಿ ರಾಮಚಂದ್ರಾಪುರ ಮಠದವರೇ ಮಹಾಬಲೇಶ್ವರ ದೇವಾಲಯದ ಆಡಳಿತ ನಡೆಸುತ್ತಿದ್ದರು. ಅದರಂತೆ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಸರ್ಕಾರ ಹಸ್ತಾಂತರಿಸಬೇಕಿತ್ತು. ಆದರೆ ಇದುವರೆಗೂ ದೇವಾಲಯವನ್ನು ವಹಿಸಿಕೊಡದ ಕಾರಣ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ನೋಟಿಸ್ ನೀಡಿದ್ದಾರೆ.

ಕೂಡಲೇ ರಾಮಚಂದ್ರಾಪುರ ಮಠಕ್ಕೆ ದೇಗುಲ ಹಸ್ತಾಂತರ ಮಾಡದಿದ್ದಲ್ಲಿ, ಕಾನೂನು ಪರಿಪಾಲಿಸದ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಕುರಿತು ದೂರು ದಾಖಲಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.