ಎಬಿವಿಪಿ-ಎನ್ಎಸ್ ಯುಐ ಕಾರ್ಯಕರ್ತರ ನಡುವೆ ಗಲಾಟೆ: ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ

ಎಬಿವಿಪಿ-ಎನ್ಎಸ್ ಯುಐ ಕಾರ್ಯಕರ್ತರ ನಡುವೆ ಗಲಾಟೆ: ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ

RK   ¦    Jan 11, 2017 05:29:35 PM (IST)

ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ವಿಚಾರದಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ಎನ್ಎಸ್ ಯು ಐ ಕಾರ್ಯಕರ್ತರ ನಡುವೆ ಗಲಾಟೆ ಆಗಿ, ಎಬಿವಿಪಿ ಎಬಿವಿಪಿ ನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಆಗಿದ್ದಕ್ಕೆ ನನ್ನ ಲೈಫ್ ಹಾಳಾಯ್ತು ಅಂತಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಶೃಂಗೇರಿ ಜೆಸಿಬಿಎಂ ಕಾಲೇಜಿನ ಮುಂಭಾಗ ಪ್ರತಿಭಟಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಬಿಕಾಂನ ಅಂತಿಮ ವರ್ಷ ಓದುತ್ತಿರೋ 21 ವರ್ಷದ ಅಭಿಷೇಕ್ ಇಂದು ಬೆಳಗ್ಗೆ ತಮ್ಮ ಮನೆಯ ಹಿಂಭಾಗದಲ್ಲಿರೋ ಮರವೊಂದಕ್ಕೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಕಾಲೇಜಿನಲ್ಲಿ ನಡೆದ ಹುತಾತ್ಮ ಯೋಧನ ನೆನಪು ಕಾರ್ಯಕ್ರಮವೇ ಕಾರಣವಾಯ್ತು. ಜ.7 ರಂದು ಕಾಲೇಜಿನಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆಯವರನ್ನು ಆಹ್ವಾನಿಸಲಾಗಿತ್ತು. ಅವರು ಕಾರ್ಯಕ್ರಮಕ್ಕೆ ಬರಬಾರದೆಂದು ಎನ್ಎಸ್ ಯು ಐ ಕಾರ್ಯಕರ್ತರು ಶೃಂಗೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ರು. ಇದೇ ವಿಚಾರಕ್ಕೆ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ಎನ್ ಎಸ್ ಯು ಐ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಗಲಾಟೆ ಹಿನ್ನೆಲೆಯಲ್ಲಿ ಮೃತ ಅಭಿಷೇಕ್ ಸೇರಿದಂತೆ ನಾಲ್ವರ ವಿರುದ್ಧ ಶೃಂಗೇರಿ ದೂರು ದಾಖಲಾಯ್ತು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಯ್ತಲ್ಲ ಅಂತಾ ಅಭಿಷೇಕ್ ಆತ್ಮಹತ್ಯೆಯ ಚಿಂತನೆ ಮಾಡಿ, ನಾನು ಯಾವುದೇ ಗಲಾಟೆ ಮಾಡಿಲ್ಲ, ನನ್ನ ಮೇಲೆ ಎಫ್ಐಆರ್ ಆಗಿದೆ, ಇನ್ಮುಂದೆ ನನಗೆ ಯಾವುದೇ ಸರ್ಕಾರಿ ಉದ್ಯೋಗ ಸಿಗೋದಿಲ್ಲ, ನಾನು ನಿಮ್ಮ ವ್ಯಾಲ್ಯೂವನ್ನ ಸಮಾಜದಲ್ಲಿ ಹಾಳು ಮಾಡಿದೆ ಅಂತಾ ಅಪ್ಪ ಅಮ್ಮನಿಗೆ ನನ್ನನ್ನ ಕ್ಷಮಿಸಿ ಅಂತಾ ಡೆತ್ ನೋಟ್ ನಲ್ಲಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಎಬಿವಿಪಿ ಕಾರ್ಯಕರ್ತರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸ್ಥಳಕ್ಕೆ ಭೇಟಿ, ಶೀಘ್ರ ನ್ಯಾಯ ಒದಗಿಸುವಂತೆ ಭರವಸೆ ಕೂಡಾ ನೀಡಿದರು. ಇನ್ನು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಹಾಗೂ ಶೃಂಗೇರಿ ಶಾಸಕ ಜೀವರಾಜ್ ಅಭಿಷೇಕ್ ಮನೆಗೆ ಬೇಟಿ ನೀಡಿ, ಸಾಂತ್ವಾನ ಹೇಳಿ ಇದೊಂದು ರಾಜಕೀಯ ಪ್ರಚೋದಿತ ಕೊಲೆ, ಆರೋಪಿಗಳನ್ನ ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು.ಒಟ್ಟಾರೆಯಾಗಿ ರಾಜಕೀಯ ಪ್ರೇರಿತವೋ ಅಥವಾ ಆತ್ಮಹತ್ಯೆ ಮಾಡಿಕೊಂಡ ಅಭಿಷೇಕ್ ನ ದುರ್ಬಲ ಮನಸ್ಸೋ ಇಲ್ಲ ಇನ್ಯಾವ ಕಾರಣವೋ ಗೊತ್ತಿಲ್ಲ. ಆದರೆ, ರಾಜಕೀಯ ಪಕ್ಷಗಳ ಬೆಂಬಲಿತ ಸಂಘಟನೆಗಳ ರಾಜಕೀಯಕ್ಕೆ ಬದುಕಿ ಬಾಳಬೇಕಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರ ದುರಂತ. ಇನ್ನಾದ್ರು ಯುವ ಸಮೂಹ ಇಂತಹಾ ಸಂಘಟನೆಗಳಿಂದ ದೂರಾಗಿ ಉತ್ತಮ ಬದುಕು ಕಂಡುಕೊಳ್ಳಲಿ ಅನ್ನೋದು ನಮ್ಮ ಆಶಯ.