ಕಾಡಾನೆಗಳ ಕಾಳಗದಲ್ಲಿ ಒಂದು ಆನೆ ಸಾವು

ಕಾಡಾನೆಗಳ ಕಾಳಗದಲ್ಲಿ ಒಂದು ಆನೆ ಸಾವು

Jan 11, 2017 08:09:08 PM (IST)

ಮಡಿಕೇರಿ: ಕಾಡಾನೆಗಳೆರಡು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಸಲಗವೊಂದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ವಡ್ಡರಳ್ಳಿ ಬಳಿಯ ಉಡ್ ಲ್ಯಾಂಡ್ ಎಸ್ಟೇಟಿನಲ್ಲಿ ನಡೆದಿದೆ.

ಕಾಡಾನೆಗಳು ಕಾದಾಟ ನಡೆಯುವ ಸಂರ್ದಭದಲ್ಲಿ ತನ್ನ ದಂತದಿಂದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆ ಕೈ ಸೇರಿದಂತೆ ಶರೀರಕ್ಕೆ ತಿವಿದುದಲ್ಲದೆ ನಾಲೆಗೆಯನ್ನು ತುಂಡರಿಸಿದೆ. ತೋಟದ ಬಳಿಯ ಕೆರೆಯೊಂದರ ಬದಿಯಲ್ಲಿ ಇರುವ ಮರಯೊಂದಕ್ಕೆ ಕಾದಾಟ ಸಂದರ್ಭದಲ್ಲಿ ಹಾನಿಯಾಗಿದೆ.

ರಾತ್ರಿ ನಡೆದ ಕಾದಾಟದಲ್ಲಿ ಕಾಡಾನೆಯು ಮತ್ತೊಂದು ಕಾಡಾನೆಯನ್ನು ಗಾಯಗೊಳಿಸಿ ದೂಡಿದ ಪರಿಣಾಮ ತಗ್ಗು ಪ್ರದೇಶಕ್ಕೆ ಬಿದ್ದ ಆನೆ ರಾತ್ರಿ ಪೂರ್ತಿ ರೋಧಿಸಿದೆ.

ಬೆಳಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಾಯಿಗೆ ನೀರು ಸುರಿದರೂ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾಡನೆ ಚೇತರಿಸಿಕೊಳ್ಳಲು ಸಾಧ್ಯವಾಗದೆ ಕೊನೆಗೂ ಸಾವನ್ನಪ್ಪಿತು.

ಮೃತಪಟ್ಟ ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯಾಧಿಕಾರಿ ಡಾ. ಉಮಾ ಶಂಕರ್ ನಡೆಸಿದರು. ಬಳಿಕ ಆನೆಯ ಎರಡು ದಂತಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿತು. ಸ್ಥಳಕ್ಕೆ ಡಿ.ಎಫ್.ಒ. ಸೂರ್ಯ ಸೇನ್, ವಲಯ ಅರಣ್ಯಧಿಕಾರಿ ಗೋಪಾಲ್, ಉಪ ವಲಯ ಅರಣ್ಯಧಿಕಾರಿ ದೇವಯ್ಯ ಭೇಟಿ ನೀಡಿದರು.