ಜಿಂಕೆ ಮಾಂಸ ಸಾಗಾಟ: ಇಬ್ಬರ ಬಂಧನ

ಜಿಂಕೆ ಮಾಂಸ ಸಾಗಾಟ: ಇಬ್ಬರ ಬಂಧನ

CI   ¦    Jul 11, 2018 05:31:18 PM (IST)
ಜಿಂಕೆ ಮಾಂಸ ಸಾಗಾಟ: ಇಬ್ಬರ ಬಂಧನ

ಮಡಿಕೇರಿ: ಅಕ್ರಮವಾಗಿ ಜಿಂಕೆ ಬೇಟೆಯಾಡಿ ಮಾಂಸ ಕೊಂಡೊಯ್ಯುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಅಧಿಕಾರಿಗಳು ಕುಟ್ಟ ಗಡಿ ಭಾಗವಾದ ತೋಲ್ಪಟ್ಟಿ ಗೇಟ್ ನಲ್ಲಿ ಇಬ್ಬರನ್ನು ಸೆರೆ ಹಿಡಿದು ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಬೈಕ್ ನಲ್ಲಿ (ಪಿ.ವೈ. 03-ಎ-8510) ತೆರಳುತ್ತಿದ್ದ ಮಾಹೆ ನಿವಾಸಿಗಳಾದ ವಿಜೇಶ್ ಹಾಗೂ ಅಜೀಶ್ ಎಂಬವರುಗಳಿಂದ 3.30 ಕೆ.ಜಿ.ಯಷ್ಟು ಮಾಂಸವನ್ನು ವಶಪಡಿಸಿಕೊಂಡು ಮಾಲು ಸಹಿತ ಇಬ್ಬರನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.