ಕಪ್ಪೆಗಳ ಅಕ್ರಮವಾಗಿ ಸಾಗಾಟ: ಅರಣ್ಯ ಇಲಾಖೆಯಿಂದ ಕಡಿವಾಣ ಅಗತ್ಯ  

ಕಪ್ಪೆಗಳ ಅಕ್ರಮವಾಗಿ ಸಾಗಾಟ: ಅರಣ್ಯ ಇಲಾಖೆಯಿಂದ ಕಡಿವಾಣ ಅಗತ್ಯ  

Srinivas Baadkar   ¦    Jun 23, 2019 12:42:42 PM (IST)
ಕಪ್ಪೆಗಳ ಅಕ್ರಮವಾಗಿ ಸಾಗಾಟ: ಅರಣ್ಯ ಇಲಾಖೆಯಿಂದ ಕಡಿವಾಣ ಅಗತ್ಯ   

ಕಾರವಾರ: ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಕಪ್ಪೆಗಳನ್ನು ಅಕ್ರಮವಾಗಿ ಸಾಗಾಟ ಹೆಚ್ಚುತ್ತಿರುವುದರಿಂದ ವಿವಿಧ ಪ್ರಜಾತಿಯ ಕಪ್ಪೆಗಳು ಕಣ್ಮರೆಯಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. 

ಮಳೆಗಾಲದ ಅತಿಥಿ ಕಪ್ಪೆಗಳಿಗೆ ಭಾರೀ ಬೇಡಿಕೆ ಇದ್ದರಿಂದ ಗೋವಾ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಅಕ್ರಮವಾಗಿ ರಫ್ತಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಯಾವುದೇ ಕಪ್ಪೆಗಳನ್ನು ಹಿಡಿಯಬಾರದು ಎನ್ನುವ ಕಠಿಣ ಕಾನೂನುಗಳಿದ್ದರೂ ಅದಾವುದೂ ಗಣಗೆಗೆ ತೆಗೆದುಕೊಳ್ಳದೆ ಕಪ್ಪೆಗಳ ಮಾರಣಹೋಮ ನಡೆಯುತ್ತಿದ್ದು ಗೋವಾ ರಾಜ್ಯ ಪ್ರತಿಷ್ಠಿತ ರೆಸ್ಟೋರೆಂಟ್‌ಗಳ ಕಿಚನ್‌ಗಳ ಪಾಲಾಗುತ್ತಿದೆ. ಜಿಲ್ಲೆಯ ಕರಾವಳಿಯ ಹೆಚ್ಚಿನ ತಾಲೂಕಿನಲ್ಲಿ ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲಗಳ ಅಕ್ರಮವಾಗಿ ಕಾರ್ಯನಿರ್ವಸುತ್ತಿದ್ದು ಇದಕ್ಕೆ ಕಡಿವಾಣ ಬೀಳಬೇಕಾದ ಅಗತ್ಯವಿದೆ.

ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಕ್ರಮವಾಗಿ ಕಪ್ಪೆ ಸಾಗಾಟ ಪತ್ತೆಯಾಗಿದೆ. ಅನೇಕ ಪ್ರಕರಣಗಳು ಗೋವಾ ಹಾಗೂ ಕರ್ನಾಟಕ ಪೊಲೀಸರು ವಶಕ್ಕೆಪಡೆದುಕೊಂಡ ಪ್ರಕರಣಗಳು ಸಹ ಇದೆ. ಆದರೂ ಕಪ್ಪೆಗಳನ್ನು ಹಿಡಿದು ಸಾಗಾಟವಾಗುವುದು ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಗೋವಾದಲ್ಲಿ ಕಪ್ಪೆ ಮಾಂಸಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಪ್ರತಿಷ್ಠಿತ ಹೋಟೇಲ್‌ಗಳಲ್ಲಿ ಭಾರತೀಯರು ಸೇರಿದಂತೆ ವಿದೇಶಿ ಪ್ರವಾಸಿಗರೂ ಕಪ್ಪೆ ಮಾಂಸ ಪಕ್ವಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇಡುತ್ತಿದ್ದರಿಂದ ಅಕ್ರಮಕ್ಕೆ ತಡೆ ಇಲ್ಲದಂತಾಗಿದೆ.

ಕಳೆದ ವರ್ಷ ಗೋವಾದಲ್ಲಿ ಪತ್ರಿ ಕಪ್ಪೆಗೆ ೧೦೦ ರೂ. ಬೆಲೆ ಇದ್ದವು. ಆದರೆ ಈ ವರ್ಷ ೩೦೦ ರಿಂದ ೪೦೦ ಬೆಲೆ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಕಪ್ಪೆ ಖರೀದಿ ಮಾಡುವವರು ಹೆಚ್ಚು ಹಣದ ಆಮೀಷನೀಡುವುದರಿಂದ ಮಳೆಗಾಳದಲ್ಲಿ ಬರುವ ಕಪ್ಪೆಗಳನ್ನು ಹಿಡಿಯುವ ಜಾಲ ಹೆಚ್ಚುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕಾರಣದಿಂದಾಗಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಪ್ಪೆ ಹಿಡಿಯುವುದು ಹೆಚ್ಚುತ್ತಿದೆ. ಈಪ್ರಕರಣಗಳು ಅರಣ್ಯ ಇಲಾಖೆಯ ಅಧೀನದಲ್ಲಿ ಬರುವುದರಿಂದ ಇಲಾಖೆ ಕಪ್ಪೆ ಹಿಡಿಯುವುದನ್ನೂ ಈ ಹಿಂದೆಯೇ ನಿಷೇಧಿಸಿದೆ. ಇಲಾಖೆಯ ಎಚ್ಚರಿಕೆಯ ಮಧ್ಯೆಯೂ ಅಧಿಕಾರಿಗಳ ಕಣ್ಣುತಪ್ಪಿಸಿ ಅಕ್ರಮ ಸಾಗಾಟಮುಂದುವರಿದಿದೆ.

ಗಾತ್ರಗಳಿಗೆ ತಕ್ಕಂತೆ ವಿವಿಧ ಕಪ್ಪೆಗಳಿಗೆ ವಿವಿಧ ಬೆಲೆಗಳನ್ನು ನೀಡಿ ಕೊಂಡು ಕೊಳ್ಳಲಾಗುತ್ತದೆ. ಗೋವಾದ ರೆಸ್ಟೋರೆಂಟ್‌ಗಳಲ್ಲಿ ವಿದೇಶಿಯರಿಗೆ ಪ್ರಿಯವಾದ ಆಹಾರ ಇದಾಗಿದ್ದರಿಂದ ಕಪ್ಪೆಯ ಮಾಂಸದಿಂದಮಾಡಲಾಗುವ ಪಕ್ವಾನಗಳನ್ನು ಆಯಾ ಹೋಟೇಲ್ ಉದ್ಯಮಿಗಳಿಗೆ ಲಾಭ ತಂದುಕೊಡುತ್ತಿದೆ. ಕಳೆದ ಕೆಲ ವರ್ಷದ ಹಿಂದೆ ಗೋವಾದಲ್ಲಿ ಕಪ್ಪೆ ಹಿಡಿಯುವುದು ಸಂಪೂರ್ಣವಾಗಿ ನಿರ್ಭಂಧ ಹಾಗೂ ಕಠಿಣಕಾನೂನು ಇದ್ದರಿಂದ ಗೋವಾದಲ್ಲಿ ಸ್ಥಳೀಯರು ಕಪ್ಪೆ ಹಿಡಿಯುವ ಅಕ್ರಮ ವ್ಯವಹಾರಕ್ಕೆ ಮುಂದಾಗುತ್ತಿಲ್ಲ. ಗಡಿ ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳಿಂದ ಹೆಚ್ಚಿನಸಂಖ್ಯೆಯಲ್ಲಿ ಕಪ್ಪೆಗಳ ಸಾಗಾಟ ಹೆಚ್ಚಿದೆ.

ಹೆಚ್ಚಿನ ಬೇಡಿಕೆ:ಗೋವಾದಲ್ಲಿ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಿದೇಶಿಗರು ಮದ್ಯದ ಜೊತೆಗೆ ಕಪ್ಪೆಯ ಮಾಂಸದಾಹಾರಕ್ಕೆ ಬೇಡಿಕೆ ಹೆಚ್ಚಿಡುತ್ತಿದ್ದಾರೆ. ರಾಜ್ಯದ ಆಯಾಭಾಗದಲ್ಲಿ ಲಭ್ಯವಾಗುವ ವಿವಿಧ ಜಾತಿಯ ಕಪ್ಪೆಗಳು ಕಪ್ಪೆ ಖಾಧ್ಯ ಪ್ರೀಯರ ಪಾಲಾಗುತ್ತಿದೆ. ಗೋವಾದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಕಪ್ಪೆಯ ಖಾದ್ಯಗಳು ’ಝಂಫಿಂಗ್ ಚಿಕನ್’ ಎಂದು ಜನಪ್ರಿಯವಾಗಿದೆ.