ಅಂಬೇಡ್ಕರ್ ಪ್ರತಿಮೆಗೆ ಸೆಗಣಿ ಎರಚಿದ ಕಿಡಿಗೇಡಿಗಳು

ಅಂಬೇಡ್ಕರ್ ಪ್ರತಿಮೆಗೆ ಸೆಗಣಿ ಎರಚಿದ ಕಿಡಿಗೇಡಿಗಳು

YK   ¦    May 25, 2019 03:01:00 PM (IST)
 ಅಂಬೇಡ್ಕರ್ ಪ್ರತಿಮೆಗೆ ಸೆಗಣಿ ಎರಚಿದ ಕಿಡಿಗೇಡಿಗಳು

ಕಲಬುರ್ಗಿ: ಕಮಲಾಪುರ ತಾಲ್ಲೂಕು ದಸ್ತಾಪುರ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಸೆಗಣಿ ಎರಚಿ ಅವಮಾನ ಮಾಡಿದ ಘಟನೆ ನಡೆದಿದೆ.

ಈ ವಿಚಾರ ಜನರಿಗೆ ತಿಳಿಯುತ್ತಿದ್ದಂತ್ತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೆಲವರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮುಂಜಾಗೃತಾ ಕ್ರಮವಾಗಿ ಸ್ಥಳಕ್ಕೆ ಹೆಚ್ಚಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.