ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ಸಂಭ್ರಮದ ಶಿವರಾತ್ರಿ

ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ಸಂಭ್ರಮದ ಶಿವರಾತ್ರಿ

CI   ¦    Feb 13, 2018 04:25:29 PM (IST)
ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ಸಂಭ್ರಮದ ಶಿವರಾತ್ರಿ

ಚೆಟ್ಟಳ್ಳಿ: ಇಂದು ಶಿವರಾತ್ರಿಯ ಪುಣ್ಯ ದಿನದಲ್ಲಿ ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ಬೆಳಿಗ್ಗೆ ೬.೩೦ ಗೆ ಶತರುದ್ರಾಭಿಷೇಕ ಹೋಮ ಶುರುವಾಗಿ ೯ಗಂಟೆಯವರೆಗೂ ನಡೆಯಿತು.

ಮೈಸೂರಿನ  ಪ್ರಕಾಶ್ ಭಟ್ ತಂಡದವರು ರುದ್ರ ಹೋಮವನ್ನು ನಡೆಸಿಕೊಟ್ಟರು. ೯.೩೦ ಯಿಂದ ಶತರುದ್ರಾಭಿಷೇಕ  ಪೂಜಾ ಕಾರ್ಯಕ್ರಮವನ್ನು ಬಂಟವಾಳದ ಸುದರ್ಶನ ಮಯ್ಯ ತಂಡದವರು ೧೨ ಗಂಟೆಯವರೆಗೂ ನಡೆಸಿಕೊಟ್ಟರು. ನಂತರ ಮಹಾ  ಪೂಜೆ ನಡೆಯಿತು. ಮಹಾ ಪೂಜೆಯ ನಂತರ ದೇವ ಬಲಿ ಕಾರ್ಯಕ್ರಮ ನಡೆಯಿತು .

ಕಳೆದ ೨೫ ವರ್ಷದಿಂದ ನಾಪೋಕ್ಲು, ಕೊಳಕೇರಿ, ಪಾರಣೆ, ಕಡೆಯಿಂದ ಕಾವೇರಿ ಬೈವಾಡ್, ಬರುವಂತೆ ಈ  ವರ್ಷವೂ ೨೫ ಜನರಿಗಿಂತ ಅಧಿಕ ಮಂದಿ ಬಂದು ಕಾವೇರಿ ಮಾತೆಯ ಕೃಪೆಗೆ ಪಾತ್ರರಾದರು .