ಶಬರಿಮಲೆ ದೇಗುಲ ರಕ್ಷಿಸಿ ರಥಯಾತ್ರೆ: ಯಡಿಯೂರಪ್ಪ ಚಾಲನೆ

ಶಬರಿಮಲೆ ದೇಗುಲ ರಕ್ಷಿಸಿ ರಥಯಾತ್ರೆ: ಯಡಿಯೂರಪ್ಪ ಚಾಲನೆ

SK   ¦    Nov 08, 2018 01:26:11 PM (IST)
ಶಬರಿಮಲೆ ದೇಗುಲ ರಕ್ಷಿಸಿ ರಥಯಾತ್ರೆ: ಯಡಿಯೂರಪ್ಪ ಚಾಲನೆ

ಕಾಸರಗೊಡು: ಶಬರಿಮಲೆ ದೇಗುಲವನ್ನು ಸಂರಕ್ಷಿಸಬೇಕು , ಅಯ್ಯಪ್ಪ ವ್ರತಧಾರಿಗಳ ವಿರುದ್ಧ ಸುಳ್ಳು ಮೊಕದ್ದಮೆ ಯಲ್ಲಿ ಸಿಲುಕಿಸುವ ರಾಜ್ಯ ಸರಕಾರದ ಹುನ್ನಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ  ಎನ್. ಡಿ ಎ  ನೇತೃತ್ವದಲ್ಲಿ   ರಥಯಾತ್ರೆಗೆ ಚಾಲನೆ ನೀಡಲಾಯಿತು.

ಮಧೂರು ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪರಿಸರದಿಂದ ಬಿಜೆಪಿ ರಾಜ್ಯ ಅಧ್ಯಕ್ಷ ಪಿ . ಎಸ್  ಶ್ರೀಧರನ್  ಪಿಳ್ಳೆ  ಮತ್ತು  ತುಷಾರ್ ವೆಳ್ಳಾಪಲ್ಲಿ ನೇತೃತ್ವದಲ್ಲಿ ರಥಯಾತ್ರೆ ನಡೆಯುತ್ತಿದ್ದು,

 

ಕರ್ನಾಟಕ ಮಾಜಿ ಮುಖ್ಯಮಂತ್ರಿ  ಬಿ . ಎಸ್  ಯಡಿಯೂರಪ್ಪ ಅವರು ಚಾಲನೆ ನೀಡಿದರು. ಕರ್ನಾಟಕ ವಿಧಾನಪರಿಷತ್  ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ರಾಜ್ಯಸಭಾ ಸದಸ್ಯ ಪಿ. ಮುರಳೀಧರನ್ ಇತರ ಮುಖಂಡರು ಭಾಗಿ.

 

ಹಲವು ಜಿಲ್ಲೆಗಳಲ್ಲಿ ಸಾಗಲಿರುವ ರಥಯಾತ್ರೆ  ನವಂಬರ್ ೧೩ ರಂದು ಪತ್ತನಂತಿಟ್ಟ ದಲ್ಲಿ ಕೊನೆಗೊಳ್ಳಲಿದೆ