ಕಿರುಗೂರು ಗ್ರಾಮದಲ್ಲಿ ಬಾಲಕಿ ಮೇಲೆ ಕಾಡುಹಂದಿ ದಾಳಿ

ಕಿರುಗೂರು ಗ್ರಾಮದಲ್ಲಿ ಬಾಲಕಿ ಮೇಲೆ ಕಾಡುಹಂದಿ ದಾಳಿ

CI   ¦    Feb 11, 2019 05:54:06 PM (IST)
ಕಿರುಗೂರು ಗ್ರಾಮದಲ್ಲಿ ಬಾಲಕಿ ಮೇಲೆ ಕಾಡುಹಂದಿ ದಾಳಿ

ಮಡಿಕೇರಿ: ಕಾಡಾನೆ, ಹುಲಿ, ಕಾಡುಕೋಣಗಳ ದಾಳಿಯ ನಂತರ ಇದೀಗ ದಕ್ಷಿಣ ಕೊಡಗಿನಲ್ಲಿ ಕಾಡುಹಂದಿಯ ಸರದಿ ಆರಂಭವಾಗಿದೆ.

ಕಾಡುಹಂದಿಯೊಂದು ದಾಳಿ ನಡೆಸಿದ ಪರಿಣಾಮ ಬಾಲಕಿಯೊಬ್ಬಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ಸಮೀಪದ ಕಿರುಗೂರು ಹೊನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಿ(6) ಎಂಬಾಕೆಯೇ ಗಾಯಗೊಂಡಿರುವ ಬಾಲಕಿಯಾಗಿದ್ದು, ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆಟೋರಿಕ್ಷಾ ಇಳಿದು ತೋಟದ ಲೈನ್ ಮನೆಯತ್ತ ತೆರಳುತ್ತಿದ್ದಾಗ ತೋಟದೊಳಗಿದ್ದ ಕಾಡು ಹಂದಿ ದಿಢೀರ್ ದಾಳಿ ಮಾಡಿದೆ. ಜೊತೆಯಲ್ಲಿದ್ದ ಬಾಲಕಿಯ ತಂದೆ, ತಾಯಿ ಕಿರುಚಿಕೊಂಡಾಗ ಹಂದಿ ಸ್ಥಳದಿಂದ ಓಡಿ ಹೋಗಿದೆ.
ಲಕ್ಷ್ಮಿಯ ತೊಡೆ ಭಾಗದಲ್ಲಿ ತೀವ್ರ ಗಾಯವಾಗಿದ್ದು, ತಕ್ಷಣ ಗ್ರಾಮಸ್ಥರು ಗೋಣಿಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಪ್ರದೇಶ ತಿತಿಮತಿ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದ ವನ್ಯಜೀವಿಗಳು ಅರಣ್ಯದಿಂದ ಕಾಫಿ ತೋಟದತ್ತ ಲಗ್ಗೆಯಿಡುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಪೊನ್ನಂಪೇಟೆ ಹೋಬಳಿ ಘಟಕದ ಸಂಚಾಲಕ ಆಲೆಮಾಡ ಮಂಜುನಾಥ್ ಆಗ್ರಹಿಸಿದ್ದಾರೆ.